ಗುಜರಾತ್‌ ಜೈಂಟ್ಸ್‌ಗೆ ರಚೆಲ್‌ ಕೋಚ್‌ ಅಹಮದಾಬಾದ್‌: ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ರಚೆಲ್‌ ಹೇನ್ಸ್ ಅವರು ಮುಂಬರುವ ವಿಮೆನ್ಸ್ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಗುಜರಾತ್‌ ಜೈಂಟ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅದಾನಿ ಸ್ಪೋರ್ಟ್ಸ್‌ಲೈನ್ ಮಾಲೀಕತ್ವದಲ್ಲಿರುವ ಫ್ರಾಂಚೈಸ್‌ ಶನಿವಾರ ಕೋಚ್‌ಗಳ ತಂಡವನ್ನು ಪ್ರಕಟಿಸಿದೆ. ಭಾರತದ ಮಾಜಿ ಸ್ಪಿನ್ನರ್ ನೂಶಿನ್ ಅಲ್ ಖಾದೀರ್ ಬೌಲಿಂಗ್‌ ಕೋಚ್‌, ಆಲ್‌ರೌಂಡರ್ ತುಷಾರ್ ಅರೋದೆ ಬ್ಯಾಟಿಂಗ್‌ ಕೋಚ್‌ ಮತ್ತು ಆಸ್ಟ್ರೇಲಿಯಾದ ಗಾವನ್‌ ಟ್ವಿನಿಂಗ್ ಅವರನ್ನು ಫೀಲ್ಡಿಂಗ್ ತರಬೇತುದಾರರಾಗಿ ನೇಮಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.