| ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಹೆಚ್ಚಿನ ಬೆಲೆ ಪಡೆದವರು ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈನಲ್ಲಿ ನಡೆಯಿತು. ಭಾರತದ ಬ್ಯಾಟರ್‌ ಸ್ಮೃತಿ ಮಂದಾನ ಅವರು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದರು. ₹3.40 ಕೋಟಿ ನೀಡಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅವರನ್ನು ಖರೀದಿಸಿದೆ. ಹೆಚ್ಚಿನ ಬೆಲೆಗೆ ಮಾರಾಟವಾದ ಆಟಗಾರ್ತಿಯರ ಪಟ್ಟಿ ಸ್ಮೃತಿ ಮಂದಾನ (ಬ್ಯಾಟರ್‌– ಭಾರತ)– ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ₹3.40 ಕೋಟಿ ಆಶ್ಲೀ ಗಾರ್ಡ್ನರ್ (ಆಲ್‌ರೌಂಡರ್‌– ಆಸ್ಟ್ರೇಲಿಯಾ) – ಗುಜರಾತ್‌ ಜೈಂಟ್ಸ್‌: ₹3.20 ಕೋಟಿ ನತಾಲಿಯಾ ಸ್ಕಿವರ್ ( ಆಲ್‌ರೌಂಡರ್‌– ಇಂಗ್ಲೆಂಡ್‌) – ಮುಂಬೈ ಇಂಡಿಯನ್ಸ್‌: ₹3.20 ಕೋಟಿ ದೀಪ್ತಿ ಶರ್ಮಾ (ಆಲ್‌ರೌಂಡರ್‌– ಭಾರತ)– ಯುಪಿ ವಾರಿಯರ್ಸ್‌– ₹2.60 ಕೋಟಿ ಜೆಮಿಮಾ ರಾಡ್ರಿಗಸ್ (ಬ್ಯಾಟರ್‌–ಭಾರತ) –ಡೆಲ್ಲಿ ಕ್ಯಾಪಿಟಲ್ಸ್‌: ₹2.20 ಕೋಟಿ ಬೆತ್ ಮೂನೀ (ವಿಕೆಟ್‌ ಕೀಪರ್‌ – ಆಸ್ಟ್ರೇಲಿಯ)–ಗುಜರಾತ್‌ ಜೈಂಟ್ಸ್‌: ₹2 ಕೋಟಿ ಶಫಾಲಿ ವರ್ಮಾ (ಬ್ಯಾಟರ್‌– ಭಾರತ) – ಡೆಲ್ಲಿ ಕ್ಯಾಪಿಟಲ್ಸ್‌: ₹2 ಕೋಟಿ ಪೂಜಾ ವಸ್ತ್ರಕರ್‌ (ಆಲ್‌ರೌಂಡರ್‌–ಭಾರತ) – ಮುಂಬೈ ಇಂಡಿಯನ್ಸ್‌: ₹1.90 ಕೋಟಿ ರಿಚಾ ಘೋಷ್‌ (ವಿಕೆಟ್‌ ಕೀಪರ್‌ – ಭಾರತ) – ಆರ್‌ಸಿಬಿ: ₹1.90 ಕೋಟಿ ಸೋಫಿ ಎಕ್ಲೆಸ್ಟೋನ್ (ಆಲ್‌ರೌಂಡರ್‌–ಇಂಗ್ಲೆಂಡ್‌)– ಯುಪಿ ವಾರಿಯರ್ಸ್‌: ₹1.80 ಕೋಟಿ ಹರ್ಮನ್‌ಪ್ರಿತ್‌ ಕೌರ್‌ (ಆಲ್‌ರೌಂಡರ್‌– ಭಾರತ)– ಮುಂಬೈ ಇಂಡಿಯನ್ಸ್‌: ₹1.80 ಕೋಟಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.