ಜಯದತ್ತ ಹರ್ಮನ್‌ ಪಡೆ ಚಿತ್ತ ಕೇಪ್‌ಟೌನ್: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ ಜಯದಿಂದ ಅಪಾರ ಆತ್ಮವಿಶ್ವಾಸದಲ್ಲಿದೆ. ಬುಧವಾರ ನಡೆಯಲಿರುವ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿಯೂ ಜಯದ ಓಟ ಮುಂದುವರಿಸುವ ಹುರುಪಿನಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಉತ್ತಮವಾಗಿ ಆಡಿದ್ದರು. ಶಫಾಲಿ ವರ್ಮಾ, ಹರ್ಮನ್‌, ಅರ್ಧಶತಕ ಗಳಿಸಿದ್ದ ಜೆಮಿಮಾ ರಾಡ್ರಿಗಸ್ ಹಾಗೂ ಕೊನೆಯ ಹಂತದಲ್ಲಿ ಮಿಂಚಿದ್ದ 18 ವರ್ಷದ ವಿಕೆಟ್‌ಕೀಪರ್–ಬ್ಯಾಟರ್ ರಿಚಾ ಘೋಷ್ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು. ಆದರೆ ಬೌಲರ್‌ಗಳ ಪ್ರದರ್ಶನ ಸಾಧಾರಣವಾಗಿತ್ತು. ಈ ವಿಭಾಗದಲ್ಲಿ ಸುಧಾರಣೆಗಳೊಂದಿಗೆ ಕಣಕ್ಕಿಳಿಯುವತ್ತ ಹರ್ಮನ್ ಬಳಗ ಚಿತ್ತ ನೆಟ್ಟಿದೆ. ಪಾಕ್ ವಿರುದ್ಧ ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಭಾರತ ಬೌಲರ್‌ಗಳು 91 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಜೊತೆಯಾಟಗಳನ್ನು ಮುರಿಯುವ ಮತ್ತು ರನ್‌ಗಳಿಗೆ ಕಡಿವಾಣ ಹಾಕಿದರೆ ಯಶಸ್ಸು ಖಚಿತ. ಫೀಲ್ಡಿಂಗ್‌ನಲ್ಲಿಯೂ ಇನ್ನಷ್ಟು ಚುರು ಕುತನ ತೋರಿದರೆ ಮತ್ತಷ್ಟು ರನ್‌ಗಳನ್ನು ತಡೆಯಬಹುದು. ಕ್ಯಾಚ್‌ಗಳನ್ನು ಕೈಚೆಲ್ಲದಿದ್ದರೆ ಎದುರಾಳಿಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬಹುದು. ಪಂದ್ಯ ಆರಂಭ: ಸಂಜೆ 6.30. ಇನ್ನೊಂದು ಪಂದ್ಯ: ಪಾಕಿಸ್ತಾನ– ಐರ್ಲೆಂಡ್. ಆರಂಭ: ರಾತ್ರಿ 10.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.