ಕರ್ನಾಟಕ ತಂಡಕ್ಕೆ ಗೆಲುವು ಬೆಂಗಳೂರು: ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟ ಮುಂದುವರಿದಿದೆ. ಒಡಿಶಾದಲ್ಲಿ ನಡೆದ ಅಂತಿಮ ಸುತ್ತಿನ ಎ ಗುಂಪಿನ ಪಂದ್ಯದಲ್ಲಿ ಮಂಗಳವಾರ ಕರ್ನಾಟಕ ತಂಡವು 2–0ಯಿಂದ ಗೋವಾ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಪರ ಜೇಕಬ್‌ ಜಾನ್‌ ಕಟ್ಟೂಕರೆನ್‌ (33ನೇ ನಿ.) ಮತ್ತು ಅಭಿಷೇಕ್ ಶಂಕರ್ ಪವಾರ್ (50ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಭಾನುವಾರ ಕರ್ನಾಟಕ ತಂಡವು 1–0ಯಿಂದ ಕಳೆದ ಬಾರಿಯ ಚಾಂಪಿಯನ್ ಕೇರಳ ತಂಡಕ್ಕೆ ಆಘಾತ ನೀಡಿತ್ತು. ಶುಕ್ರವಾರ (ಫೆ.17) ನಡೆಯುವ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮಹಾರಾಷ್ಟ್ರ ಸವಾಲು ಎದುರಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.