ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ ಮೌಂಟ್‌ ಮಾಂಗನೂಯಿ, ನ್ಯೂಜಿಲೆಂಡ್‌ (ಎಪಿ): ಜೇಮ್ಸ್ ಆ್ಯಂಡರ್ಸನ್‌ (18ಕ್ಕೆ 4) ಹಾಗೂ ಸ್ಟುವರ್ಟ್ ಬ್ರಾಡ್‌ (49ಕ್ಕೆ 4) ಅವರ ಬೌಲಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡವು ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಜಯ ಗಳಿಸಿತು. ಭಾನುವಾರ ಕೊನೆಗೊಂಡ ಪಂದ್ಯದಲ್ಲಿ ಇಂಗ್ಲೆಂಡ್‌ 267 ರನ್‌ಗಳಿಂದ ಆತಿಥೇಯ ನ್ಯೂಜಿಲೆಂಡ್‌ಗೆ ಸೋಲುಣಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌ 9 ವಿಕೆಟ್‌ಗೆ 325 ಡಿಕ್ಲೇರ್ಡ್‌. ನ್ಯೂಜಿಲೆಂಡ್‌ 82.5 ಓವರ್‌ಗಳಲ್ಲಿ 306. ಎರಡನೇ ಇನಿಂಗ್ಸ್‌: ಇಂಗ್ಲೆಂಡ್ 73.5 ಓವರ್‌ಗಳಲ್ಲಿ 374. ನ್ಯೂಜಿಲೆಂಡ್‌: 45.3 ಓವರ್‌ಗಳಲ್ಲಿ 126 (ಟಾಮ್ ಲಥಾಮ್ 15, ಡೆರಿಲ್ ಮಿಚೆಲ್‌ ಔಟಾಗದೆ 57, ಮೈಕಲ್ ಬ್ರೇಸ್‌ವೆಲ್‌ 25; ಜೇಮ್ಸ್ ಆ್ಯಂಡರ್ಸನ್‌ 18ಕ್ಕೆ 4, ಸ್ಟುವರ್ಟ್ ಬ್ರಾಡ್‌ 49ಕ್ಕೆ 4). ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 267 ರನ್‌ಗಳ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.