ಟಿ20 ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ ಹರ್ಮನ್‌ಪ್ರೀತ್ ಕೌರ್‌ ಗೆಬೆರಾ, ದಕ್ಷಿಣ ಆಫ್ರಿಕಾ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅವರು ಟಿ20 ಮಾದರಿಯಲ್ಲಿ 3,000 ರನ್ ಪೂರೈಸಿದರು. ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 7 ರನ್‌ ಗಳಿಸಿದ್ದ ವೇಳೆ ಅವರು ಈ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 4ನೇ ಹಾಗೂ ಭಾರತದ ಮೊದಲ ಮಹಿಳಾ ಕ್ರಿಕೆಟರ್‌ ಎನಿಸಿದರು. ನ್ಯೂಜಿಲೆಂಡ್‌ ತಂಡದ ಸೂಝಿ ಬೆಟ್ಸ್‌ (3,820), ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌(3,346), ವೆಸ್ಟ್‌ ಇಂಡೀಸ್‌ನ ಸಾರಾ ಟೇಲರ್‌(3,166) ಉಳಿದ ಮೂವರು. ಇದನ್ನೂ ಓದಿ: T20 ವಿಶ್ವಕಪ್ | ಸ್ಮೃತಿ ಮಂದಾನ ಅಮೋಘ ಬ್ಯಾಟಿಂಗ್; ಐರ್ಲೆಂಡ್‌ಗೆ ಸವಾಲಿನ ಗುರಿ ಭಾರತ ಹಾಗೂ ಐರ್ಲೆಂಡ್‌ ತಂಡಗಳು ಇಲ್ಲಿನ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸುತ್ತಿವೆ. ಇದು ಹರ್ಮನ್‌ಗೆ 150ನೇ ಪಂದ್ಯ ಎಂಬುದು ವಿಶೇಷ. ಈ ಪಂದ್ಯದಲ್ಲಿ ಒಟ್ಟು 20 ಎಸೆತಗಳನ್ನು ಎದುರಿಸಿದ ಅವರು 13 ರನ್‌ ಗಳಿಸಿ ಔಟಾದರು. . . . . 3️⃣0️⃣0️⃣0️⃣ T20I @! 🙌 🙌 ▶️ ://./ # | #T20WorldCup | # ../cveMzpcou1 🚨 🚨 1⃣5⃣0⃣ T20Is 🙌 🔝 # @ 👏 👏# | #T20WorldCup ../X1DyIqhlZI ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.