ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಅಶ್ವಿನ್‌ ದುಬೈ: ಭಾರತ ತಂಡದ ರವಿಚಂದ್ರನ್ ಅಶ್ವಿನ್‌ ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲರ್‌ಗಳ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಅವರ ಸಹ ಆಟಗಾರ ರವೀಂದ್ರ ಜಡೇಜ ಅಗ್ರ 10ರೊಳಗೆ ಸ್ಥಾನ ಗಳಿಸಿದ್ದು, ಒಂಬತ್ತನೇ ಕ್ರಮಾಂಕದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನವದೆಹಲಿ ಯಲ್ಲಿ ಇತ್ತೀಚೆಗೆ ನಡೆದ ಬಾರ್ಡರ್‌– ಗಾವಸ್ಕರ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ 10 ವಿಕೆಟ್‌ ಗಳಿಸಿದ್ದು, ಜಡೇಜ ಅವರ ರ‍್ಯಾಂಕಿಂಗ್ ಏರಿಕೆಗೆ ಕಾರಣ ವಾಗಿದೆ. ಅವರು ಏಳು ಸ್ಥಾನಗಳ ಏರಿಕೆ ದಾಖಲಿಸಿದ್ದಾರೆ. 2019ರ ಸೆಪ್ಟೆಂಬರ್‌ ಬಳಿಕ ಅವರು ಮೊದಲ ಬಾರಿಗೆ ಅಗ್ರ 10ರೊಳಗಿನ ಸ್ಥಾನ ಗಿಟ್ಟಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.