ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌: ರಿಚಾ ಘೋಷ್‌ಗೆ ಬಡ್ತಿ ದುಬೈ: ಭಾರತದ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ಅವರು ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 16 ಸ್ಥಾನಗಳ ಬಡ್ತಿ ಪಡೆದಿದ್ದು, 20ನೇ ಸ್ಥಾನಕ್ಕೇರಿದ್ದಾರೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ರಿಚಾ ಉತ್ತಮ ಆಟವಾಡುತ್ತಿರುವುದು ಅವರ ರ‍್ಯಾಂಕಿಂಗ್ ಏರಿಕೆಗೆ ಕಾರಣವಾಗಿದೆ. ಇದು ರಿಚಾ ಅವರ ವೃತ್ತಿಜೀವನದ ಶ್ರೇಷ್ಠ ರ‍್ಯಾಂಕಿಂಗ್ ಆಗಿದೆ. ಬ್ಯಾಟರ್‌ಗಳ ರ‍್ಯಾಂಕಿಂಗ್‌ ಅಗ್ರ 20ರ ಪಟ್ಟಿಯಲ್ಲಿ ಭಾರತದ ಐವರು ಆಟಗಾರ್ತಿಯರಿದ್ದಾರೆ. ಸ್ಮೃತಿ ಮಂದಾನ (3ನೇ ಸ್ಥಾನ), ಶಫಾಲಿ ವರ್ಮಾ (10ನೇ), ಜೆಮಿಮಾ ರಾಡ್ರಿಗಸ್‌ (12ನೇ) ಮತ್ತು ಹರ್ಮನ್‌ಪ್ರೀತ್ ಕೌರ್ (13ನೇ) ಪಟ್ಟಿಯಲ್ಲಿ ರಿಚಾ ಅವರಿಗಿಂತ ಮುಂದಿರುವ ಆಟಗಾರ್ತಿಯರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.