ಟಿ20 ವಿಶ್ವಕಪ್‌ನ ‘ಅತ್ಯಂತ ಪ್ರಭಾವಿ ತಂಡ’ದಲ್ಲಿ ರಿಚಾ ಘೋಷ್‌ಗೆ ಸ್ಥಾನ ಕೇಪ್‌ಟೌನ್‌ (ಪಿಟಿಐ): ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಘೋಷ್‌ ಅವರು ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ‘ಅತ್ಯಂತ ಪ್ರಭಾವಿ ತಂಡ’ದಲ್ಲಿ ಸ್ಥಾನ ಪಡೆದುಕೊಂಡಿದ್ಧಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾನುವಾರ ಕೊನೆಗೊಂಡ ಟೂರ್ನಿಯ 11 ಶ್ರೇಷ್ಠ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. 19 ವರ್ಷದ ರಿಚಾ ಅವರು ಟೂರ್ನಿಯಲ್ಲಿ 136 ರನ್‌ ಗಳಿಸಿದ್ದರು. ಪಾಕಿಸ್ತಾನದ ವಿರುದ್ಧ ಅಜೇಯ 31, ವೆಸ್ಟ್‌ ಇಂಡೀಸ್‌ ವಿರುದ್ಧ ಅಜೇಯ 44 ಹಾಗೂ ಇಂಗ್ಲೆಂಡ್‌ ವಿರುದ್ಧ ಅಜೇಯ 47 ರನ್‌ ಕಲೆಹಾಕಿದ್ದರು. ವಿಶ್ವಕಪ್‌ ಟ್ರೋಫಿ ಜಯಿಸಿದ ಆಸ್ಟ್ರೇಲಿಯಾ ತಂಡದ ನಾಲ್ವರು ಮತ್ತು ಇಂಗ್ಲೆಂಡ್‌ನ ಮೂವರು ತಂಡದಲ್ಲಿದ್ದಾರೆ. ತಂಡ ಹೀಗಿದೆ: ಅಲಿಸಾ ಹೀಲಿ, ಆ್ಯಶ್ಲಿ ಗಾರ್ಡನರ್‌, ಡಾರ್ಸಿ ಬ್ರೌನ್‌, ಮೇಗನ್‌ ಶುಟ್‌ (ಆಸ್ಟ್ರೇಲಿಯಾ), ತಜ್ಮಿನ್‌ ಬಿಟ್‌, ಲಾರಾ ವೊಲ್ವಾರಡ್ಟ್, ಶಬ್ನಿಮ್‌ ಇಸ್ಮಾಯಿಲ್‌ (ದಕ್ಷಿಣ ಆಫ್ರಿಕಾ), ನಥಾಲಿ ಸಿವೆರ್ ಬ್ರಂಟ್‌, ಸೋಫಿ ಎಕ್ಸೆಲ್‌ಸ್ಟೋನ್‌ (ಇಂಗ್ಲೆಂಡ್‌), ರಿಚಾ ಘೋಷ್‌ (ಭಾರತ), ಕರಿಷ್ಮಾ ರಮರಾಕ್ (ವೆಸ್ಟ್‌ ಇಂಡೀಸ್‌). 12ನೇ ಆಟಗಾರ್ತಿ: ಓರ್ಲಾ ಪ್ರಿಂಡರ್‌ಗಾಸ್ಟ್‌ (ಐರ್ಲೆಂಡ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.