ಮಾ.2ರಂದು ಬಿಟಿಸಿಯಲ್ಲಿ ಟಿ10 ಕ್ರಿಕೆಟ್ ಬೆಂಗಳೂರು: ಇಲ್ಲಿಯ ಬೆಂಗಳೂರು ಟರ್ಫ್‌ ಕ್ಲಬ್‌ ಆಶ್ರಯದಲ್ಲಿ ಮಾರ್ಚ್ 2ರಂದು ಟಿ10 ಆಹ್ವಾನಿತ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಬಿಟಿಸಿಯಲ್ಲಿರುವ ಮೈದಾನದಲ್ಲಿ ಟಿ10 ಟೂರ್ನಿ ನಡೆಯಲಿದೆ. ಬಿಟಿಸಿ ಕ್ಲಬ್‌ ಸದಸ್ಯರಿರುವ ವಾರಿಯರ್ಸ್, ಟ್ರೇನರ್ಸ್ ಎಲೆವನ್ ಹಾಗೂ ಜಾಕಿಸ್ ಎಲೆವನ್ ತಂಡಗಳು ಆಡಲಿವೆ. ಮಾ.2ರಂದು ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ ಎಂದು ಬಿಟಿಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.