ರಾಯಲ್ಸ್‌ ಕೋಚ್‌ ಕುಮಾರ ಸಂಗಕ್ಕಾರ ಮುಂದುವರಿಕೆ ನವದೆಹಲಿ: ಕುಮಾರ ಸಂಗಕ್ಕಾರ ಅವರು ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಮತ್ತು ಕ್ರಿಕೆಟ್‌ ವ್ಯವಹಾರಗಳ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ‘ಸಂಗಕ್ಕಾರ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಲಿದ್ದು, ಟ್ರೆವರ್‌ ಪೆನ್ನಿ ಸಹಾಯಕ ಕೋಚ್‌ ಆಗಿರುವರು’ ಎಂದು ರಾಯಲ್ಸ್‌ ಫ್ರಾಂಚೈಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ‘ಲಸಿತ್‌ ಮಾಲಿಂಗ ಮತ್ತು ದಿಶಾಂತ್‌ ಯಾಗ್ನಿಕ್‌ ಅವರು ಕ್ರಮವಾಗಿ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್‌ ಆಗಿ ಮುಂದುವರಿಯಲಿದ್ದಾರೆ’ ಎಂದಿದೆ. ಜಾನ್‌ ಗ್ಲಾಸ್ಟರ್‌ (ಫಿಸಿಯೊ) ಮತ್ತು ಡಾ.ರಾಬ್‌ ಯಂಗ್ (ತಂಡದ ವೈದ್ಯ) ಅವರನ್ನೂ ಮುಂದುವರಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.