ಸೂರ್ಯಕುಮಾರ್ ಪೋಸ್ಟ್‌ಗೆ ಮೆಚ್ಚುಗೆ ಬೆಂಗಳೂರು: ಅಮೃತ್‌ ನೋನಿಯ ಉತ್ಪನ್ನ ‘ಅಮೃತ್‌ ನೋನಿ ಪೇನ್‌ ರಿಲೀಫ್‌ ಸ್ಪ್ರೇ’ಗೆ ರಾಯಭಾರಿಯಾಗಿರುವ ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್‌, ಇತ್ತೀಚೆಗೆ ಆ ಉತ್ಪನ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ ವೈರಲ್‌ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ‘ಅಮೃತ್ ನೋನಿ ಕುಟುಂಬದ ಭಾಗವಾಗಲು ನನಗೆ ಸಂತೋಷವಾಗುತ್ತಿದೆ. ತ್ವರಿತ ನೋವು ನಿವಾರಣೆ ವಿಷಯದಲ್ಲಿ, ನಾನು ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ’ಯನ್ನು ಹೆಚ್ಚು ನಂಬುತ್ತೇನೆ. ಇದರಲ್ಲಿರುವ ಪುರಾತನ ಆಯುರ್ವೇದ ಸೂತ್ರ ಮತ್ತು ಸಮೃದ್ಧ ಗಿಡಮೂಲಿಕೆಗಳ ಸಾರಗಳು ನಮಗೆ ಎಲ್ಲ ರೀತಿಯ ನೋವಿನಿಂದ ತ್ವರಿತ ಮತ್ತು ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತವೆ’ ಎಂದು ಸೂರ್ಯಕುಮಾರ್ ಯಾದವ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಅನ್ನು ಬಹಳಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.