ಟಿ20: ಕೊನೆಯ ಪಂದ್ಯ ಗೆದ್ದ ಪಾಕಿಸ್ತಾನ ಶಾರ್ಜಾ (ಎಪಿ): ಪಾಕಿಸ್ತಾನ ತಂಡ ಕೊನೆಯ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವನ್ನು 66 ರನ್‌ಗಳಿಂದ ಮಣಿಸಿ ‘ಕ್ಲೀನ್‌ಸ್ವೀಪ್‌’ ಅವಮಾನದಿಂದ ಪಾರಾಯಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ರಶೀದ್‌ ಖಾನ್‌ ಬಳಗ ಮೂರು ಪಂದ್ಯಗಳ ಸರಣಿಯನ್ನು 2–1 ರಲ್ಲಿ ಗೆದ್ದುಕೊಂಡಿತು. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ, ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 182 ರನ್‌ ಪೇರಿಸಿತು. ಸೈಮ್‌ ಅಯೂಬ್ (49) ಮತ್ತು ಇಫ್ತಿಕಾರ್‌ ಅಹ್ಮದ್‌ (31) ಅವರು ಉತ್ತಮ ಆಟವಾಡಿದರು. ಶಾದಾಬ್‌ ಖಾನ್‌ (13ಕ್ಕೆ 3) ಮತ್ತು ಇಹ್ಸಾನುಲ್ಲಾ (29ಕ್ಕೆ 3) ಅವರ ಬಿಗುವಾದ ದಾಳಿಗೆ ನಲುಗಿದ ಅಫ್ಗಾನಿಸ್ತಾನ ತಂಡ 18.4 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟಾಯಿತು. ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 182 (ಸೈಮ್‌ ಅಯೂಬ್ 49, ಅಬ್ದುಲ್ಲಾ ಶಫೀಕ್‌ 23, ಇಫ್ತಿಕಾರ್‌ ಅಹ್ಮದ್‌ 31, ಶಾದಾಬ್‌ ಖಾನ್‌ 28, ಮುಜೀಬ್‌ ಉರ್‌ ರಹ್ಮಾನ್‌ 28ಕ್ಕೆ 2, ಫಜಲ್‌ಹಕ್‌ ಫರೂಕಿ 25ಕ್ಕೆ 1, ರಶೀದ್‌ ಖಾನ್‌ 31ಕ್ಕೆ 1) ಅಫ್ಗಾನಿಸ್ತಾನ 18.4 ಓವರ್‌ಗಳಲ್ಲಿ 116 (ರಹ್ಮಾನುಲ್ಲಾ ಗುರ್ಬಾಜ್ 18, ಮೊಹಮ್ಮದ್ ನಬಿ 17, ಅಜ್ಮತುಲ್ಲಾ ಒಮರ್‌ಜಾಯ್ 21, ಶಾದಾಬ್‌ ಖಾನ್‌ 13ಕ್ಕೆ 3, ಇಹ್ಸಾನುಲ್ಲಾ 29ಕ್ಕೆ 3) ಫಲಿತಾಂಶ: ಪಾಕಿಸ್ತಾನಕ್ಕೆ 66 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.