ಐಪಿಎಲ್‌: ಜಿಯೊಸಿನೆಮಾದಲ್ಲಿ 147 ಕೋಟಿ ವಿಡಿಯೊ ವೀವ್ಸ್ ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್ ಟಿ20 ಟೂರ್ನಿಯ ಮೊದಲ ವಾರಾಂತ್ಯದ ಪಂದ್ಯಗಳು ಜಿಯೊಸಿನೆಮಾ‌ದಲ್ಲಿ ದಾಖಲೆಯ 147 ಕೋಟಿ ವಿಡಿಯೊ ವೀವ್ಸ್‌ ಪಡೆದಿವೆ. ಇದು 2022ರ ಐಪಿಎಲ್‌ ಟೂರ್ನಿಯ ಎಲ್ಲ ಪಂದ್ಯಗಳ ಡಿಜಿಟಲ್‌ ವೀಕ್ಷಣೆಯ ಪ್ರಮಾಣಕ್ಕಿಂತಲೂ ಅಧಿಕವಾಗಿದ್ದು, ದಾಖಲೆ ಸೃಷ್ಟಿಯಾಗಿದೆ. 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳೆ ಪಡೆದಿದ್ದ ವೀವ್ಸ್‌ಗಳ ಸಂಖ್ಯೆಯನ್ನೂ ಮೀರಿಸಿದೆ ಎಂದು ವಯಾಕಾಂ 18 ಸ್ಪೋರ್ಟ್ಸ್‌ ಸಿಇಒ ಅನಿಲ್‌ ಜಯರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐಪಿಎಲ್‌ ಶುರುವಾದ ಬಳಿಕ ಜಿಯೊಸಿನೆಮಾದ 5 ಕೋಟಿ ಆ್ಯಪ್‌ಗಳು ಹೊಸದಾಗಿ ಡೌನ್‌ಲೋಡ್‌ ಆಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ನಡುವಣ ಉದ್ಘಾಟನಾ ಪಂದ್ಯದ ದಿನ 2.5 ಕೋಟಿ ಡೌನ್‌ಲೋಡ್‌ ಆಗಿದೆ ಎಂದಿದ್ದಾರೆ. 14 ಕೋಟಿ ಮಂದಿ ವೀಕ್ಷಣೆ: ಐಪಿಎಲ್‌ ಟೂರ್ನಿಯ ಮೊದಲ ಪಂದ್ಯವನ್ನು ಟಿ.ವಿ ಮೂಲಕ 14 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಡಿಸ್ನಿಸ್ಟಾರ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.