ಆರ್‌ಸಿಬಿ ಕ್ರಿಕೆಟ್‌ ನಿರ್ದೇಶಕರಾಗಿ ಬೊಬಾಟ್‌ ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್‌ ಪರ್ಫಾರ್ಮೆನ್ಸ್‌ ನಿರ್ದೆಶಕರಾಗಿ ಇಂಗ್ಲೆಂಡ್‌ನ ಮೊ ಬೊಬಾಟ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕ್ಲಬ್ ಶುಕ್ರವಾರ ತಿಳಿಸಿದೆ. ಕಳೆದ ಸಾಲಿನವರೆಗೆ ಕೋಚ್‌ ಆಗಿದ್ದ ಮೈಕ್ ಹೆಸ್ಸನ್ ಸ್ಥಾನಕ್ಕೆ ಬೊಬಾಟ್ ಅವರ ನೇಮಕ ಆಗಿದೆ. 40 ವರ್ಷ ವಯಸ್ಸಿನ ಅವರು ಈ ಹಿಂದೆ ಇಂಗ್ಲೆಂಡ್ ತಂಡದ ಪರ್ಫಾರ್ಮೆನ್ಸ್‌ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಅವರು ಆರ್‌ಸಿಬಿ ತಂಡದಲ್ಲಿ ನೂತನ ಕೋಚ್ ಆ್ಯಂಡಿ ಫ್ಲವರ್ ಅವರ ಜೊತೆ ಕಾರ್ಯನಿರ್ವಹಿಸಲಿದ್ದಾರೆ. ಇಂಗ್ಲೆಂಡ್‌ ತಂಡದ ಯಶಸ್ಸಿನಲ್ಲಿಯೂ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಬೊಬಾಟ್‌ ಅವರ ಪಾತ್ರದಲ್ಲಿ ಪ್ರತಿಭಾ ಶೋಧ, ಯಶಸ್ಸಿನ ಯೋಜನೆ ರೂಪಿಸುವುದು ಮೊದಲಾದ ಕಾರ್ಯಭಾರ ಒಳಗೊಂಡಿವೆ. ಮಹಿಳಾ ತಂಡಕ್ಕೆ ಕೋಚ್‌ ನೇಮಕ:ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್‌ ಅವರು ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲಿರುವ ಆರ್‌ಸಿಬಿ ತಂಡಕ್ಕೆ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.