2023: ಬಟ್ಲರ್, ಜೈಸ್ವಾಲ್ ಮಿಂಚು: ಡೆಲ್ಲಿ ವಿರುದ್ಧ ರಾಜಸ್ಥಾನ್‌ಗೆ ಗೆಲುವು ಗುವಾಹಟಿ: ಆರಂಭಿಕರಾದ ಜೋಸ್ ಬಟ್ಲರ್ (79) ಹಾಗೂ ಯಶಸ್ವಿ ಜೈಸ್ವಾಲ್ (60) ಸ್ಫೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 57 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸಂಜು ಸ್ಯಾಮ್ಸನ್ ಪಡೆ, ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ, ನಾಯಕ ಡೇವಿಡ್ ವಾರ್ನರ್ (65 ರನ್, 55 ಎಸೆತ, 7 ಬೌಂಡರಿ) ಅರ್ಧಶತಕದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಲಿತ್ ಯಾದವ್ 39 ರನ್ (24 ಎಸೆತ, 5 ಬೌಂಡರಿ) ಗಳಿಸಿದರು. ಈ ನಡುವೆ ವಾರ್ನರ್, ಐಪಿಎಲ್‌ನಲ್ಲಿ 6,000 ರನ್ ಪೂರ್ಣಗೊಳಿಸಿದರು. !@ - 199/4 👌🏻👌🏻 #. ❓ ▶️ ://./# | # ../ ರಾಜಸ್ಥಾನ ಪರ ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲೇ 98 ರನ್‌ಗಳ ಜೊತೆಯಾಟ ಕಟ್ಟಿದ ಜೈಸ್ವಾಲ್ ಹಾಗೂ ಬಟ್ಲರ್ ಗೆಲುವಿನ ರೂವಾರಿ ಎನಿಸಿದರು. ಬಟ್ಲರ್ 51 ಎಸೆತಗಳಲ್ಲಿ 79 ರನ್ (11 ಬೌಂಡರಿ, 1 ಸಿಕ್ಸರ್) ಹಾಗೂ ಜೈಸ್ವಾಲ್ 31 ಎಸೆತಗಳಲ್ಲಿ 60 ರನ್ (11 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಅಜೇಯ 39 ರನ್‌ಗಳ (21 ಎಸೆತ, 4 ಸಿಕ್ಸರ್, 1 ಬೌಂಡರಿ) ಕಾಣಿಕೆ ನೀಡಿದರು. ನಾಯಕ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟ್ ಆದರು. ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ ಹಾಗೂ ಯಜುವೇಂದ್ರ ಚಾಹಲ್ ತಲಾ ಮೂರು ಮತ್ತು ಆರ್. ಅಶ್ವಿನ್ ಎರಡು ವಿಕೆಟ್ ಗಳಿಸಿದರು. ! 🤯 . . # ⚡️⚡️# ! ▶️ ://./# | # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.