ಗೆಲುವಿನ ಖಾತೆ ತೆರೆಯುವತ್ತ ಸನ್‌ರೈಸರ್ಸ್ ಚಿತ್ತ ಹೈದರಾಬಾದ್: ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭಾನುವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಆತ್ಮವಿಶ್ವಾಸದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಶಿಖರ್ ಧವನ್ ನಾಯಕತ್ವದ ಪಂಜಾಬ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಜಯಿಸಿತ್ತು. ಏಡನ್ ಮರ್ಕರಂ ನೇತೃತ್ವದ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಸೋತಿತ್ತು. ಸನ್‌ರೈಸರ್ಸ್ ತಂಡದ ಪ್ರಮುಖ ಬ್ಯಾಟರ್‌ಗಳಾದ ಮಯಂಕ್ ಅಗರವಾಲ್, ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್ ಹಾಗೂ ರಾಹುಲ್ ತ್ರಿಪಾಠಿ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ದೊಡ್ಡ ಮೊತ್ತ ಪೇರಿಸುವುದು ಸುಲಭವಾಗಲಿದೆ. ಪಂಜಾಬ್ ತಂಡದ ಆರಂಭಿಕ ಜೋಡಿ ಶಿಖರ್ ಹಾಗೂ ಪ್ರಭಸಿಮ್ರನ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಇಬ್ಬರೂ ಅರ್ಧಶತಕ ಗಳಿಸಿದ್ದರು. ಆದರೆ, ರಾಜಪಕ್ಸ ಮತ್ತು ದೇಶಿ ಕ್ರಿಕೆಟ್‌ನ ಸ್ಪೋಟಕ ಶೈಲಿಯ ಬ್ಯಾಟರ್ ಶಾರೂಕ್ ಖಾನ್ ಅವರ ಅಸ್ಥಿರ ಲಯವು ತಂಡದ ಚಿಂತೆಗೆ ಕಾರಣವಾಗಿದೆ. ಎಡಗೈ ವೇಗಿಗಳಾದ ಸ್ಯಾಮ್ ಕರನ್, ಆರ್ಷದೀಪ್ ಸಿಂಗ್ ಹಾಗೂ ಸ್ಪಿನ್ನರ್ ರಾಹುಲ್ ಚಾಹರ್ ಅವರ ಸವಾಲನ್ನು ಸನ್‌ರೈಸರ್ ಬ್ಯಾಟಿಂಗ್ ಪಡೆ ಮೀರಿ ನಿಲ್ಲಬೇಕಿದೆ. ತಂಡಗಳು: ಸನ್‌ರೈಸರ್ಸ್ ಹೈದರಾಬಾದ್: ಏಡನ್ ಮರ್ಕರಂ (ನಾಯಕ), ಭುವನೇಶ್ವರ್ ಕುಮಾರ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಮಯಂಕ್ ಅಗರವಾಲ್, ಅನ್ಮೋಲ್‌ಪ್ರೀತ್ ಸಿಂಗ್, ಹ್ಯಾರಿ ಬ್ರೂಕ್, ಮಯಂಕ್ ಡಾಗರ್, ಫಜಲ್‌ಹಕ್ ಫಾರೂಕಿ, ಅಕೀಲ್ ಹುಸೇನ್, ಕಾರ್ತಿಕ್ ತ್ಯಾಗಿ, ಹೆನ್ರಿಚ್ ಕ್ಲಾಸೆನ್, ಮಯಂಕ್ ಮಾರ್ಕಂಡೆ, ಟಿ. ನಟರಾಜನ್, ನಿತೀಶಕುಮಾರ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಆದಿಲ್ ರಶೀದ್, ಸನ್ವೀರ್ ಸಿಂಗ್, ರಾಹುಲ್ ತ್ರಿಪಾಠಿ, ಉಮ್ರಾನ್ ಮಲಿಕ್, ವಿವ್ರಾಂತ್ ಶರ್ಮಾ, ಸಮರ್ಥ್ ವ್ಯಾಸ್, ವಾಷಿಂಗ್ಟನ್ ಸುಂದರ್, ಉಪೇಂದ್ರ ಯಾದವ್. ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಆರ್ಷದೀಪ್ ಸಿಂಗ್, ಬಲ್ತೇಜ್ ಸಿಂಗ್, ರಾಜ್ ಬಾವಾ, ರಾಹುಲ್ ಚಾಹರ್, ಸ್ಯಾಮ್ ಕರನ್, ರಿಷಿ ಧವನ್, ನೇಥನ್ ಎಲ್ಲಿಸ್, ಹರಪ್ರೀತ್ ಬ್ರಾರ್, ಹರಪ್ರೀತ್ ಸಿಂಗ್, ವಿದ್ವತ್ ಕಾವೇರಪ್ಪ, ಲಿಯಾಮ್ ಲಿವಿಂಗ್‌ಸ್ಟೋನ್, ಮೋಹಿತ್ ರಾಠಿ, ಪ್ರಭಸಿಮ್ರನ್ ಸಿಂಗ್, ಕಗಿಸೊ ರಬಾಡ, ಭಾನುಕಾ ರಾಜಪಕ್ಸ, ಎಂ. ಶಾರೂಕ್ ಖಾನ್, ಜಿತೇಶ್ ಶರ್ಮಾ, ಶಿವಂ ಸಿಂಗ್, ಮ್ಯಾಥ್ಯೂ ಶಾರ್ಟ್, ಸಿಕಂದರ್ ರಝಾ, ಅಥರ್ವ ತೈಡೆ ಪಂದ್ಯ ಆರಂಭ: ಭಾನುವಾರ(ಏಪ್ರಿಲ್ 9) ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್. ಜಿಯೊ ಸಿನೆಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.