ವಿಶ್ವಕಪ್ ಪಂದ್ಯ ನೋಡಲು ಮೋದಿ ಕ್ರೀಡಾಂಗಣಕ್ಕೆ ಬಾರದ ಜನ; ಅಚ್ಚರಿಗೊಂಡ ದಿಗ್ಗಜರು ಅಹಮದಾಬಾದ್: ಕ್ರಿಕೆಟ್‌ ಒಂದು ಧರ್ಮ ಎಂದೇ ಭಾವಿಸುವ ಭಾರತದಲ್ಲಿ 2023ರ ಐಸಿಸಿ ಸೀಮಿತ ಓವರ್‌ಗಳ ವಿಶ್ವಕಪ್ ಕ್ರಿಕೆಟ್ ಆರಂಭವಾಗಿದೆ. ಆದರೆ ಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿದ್ದರ ಕುರಿತು ಆಘಾತ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟರ್‌ಗಳು, ‘ಎಲ್ಲಿ ಹೋದರು ಪ್ರೇಕ್ಷಕರು...?’ ಎಂದು ಉದ್ಘಾರ ಎಳೆದಿದ್ದಾರೆ. 2023ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಭಾರತದಲ್ಲಿ ಆಯೋಜನೆಗೊಂಡಿದೆ. ಇದರ ಮೊದಲ ಪಂದ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್‌ ಹಾಗೂ ರನ್ನರ್‌ಅಪ್ ನ್ಯೂಜಿಲೆಂಡ್ ವಿರುದ್ಧ ಗುರುವಾರ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. 2021ರಲ್ಲಿ ಅನಾವಣಗೊಂಡ ಈ ಮೈದಾನದಲ್ಲಿ ಒಟ್ಟು 1.2 ಲಕ್ಷ ಆಸನ ವ್ಯವಸ್ಥೆ ಇದೆ. ಆದರೆ ಗುರುವಾರದ ಪಂದ್ಯದಲ್ಲಿ ಕೆಲವೇ ಕೆಲವು ಸಾವಿರದಷ್ಟು ಜನ ಮಾತ್ರ ಪಾಲ್ಗೊಂಡಿದ್ದರು. ಕೇಸರಿ ಬಣ್ಣದ ಆಸನಗಳು ಕಾಲಿ ಇದ್ದುದಕ್ಕೆ ಜಾಗತಿಕ ಮಟ್ಟದ ಕ್ರಿಕೆಟ್ ಅಭಿಮಾನಿಗಳು ಮೈಕ್ರೊ ಬ್ಲಾಗಿಂಗ್ ವೇದಿಕೆ ‘ಎಕ್ಸ್‌‘ ನಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನ ಡ್ಯಾನಿ ವ್ಯಾಟ್‌ ಅವರು ಎಕ್ಸ್ ವೇದಿಕೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ‘ಎಲ್ಲಿದ್ದಾರೆ ಜನ...?’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೆಮಿಮಾ ರೋಡ್ರಿಗಸ್, ‘ಅ. 14ರಂದು ನಡೆಯಲಿರುವ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಜನರು ಕಾಯುತ್ತಿದ್ದಾರೆ’ ಎಂದಿದ್ದಾರೆ. 😁 ://./RBNOR2JDtt ವಿಳಂಬವಾಗಿ ಟಿಕೆಟ್‌ ಮಾರಾಟ ಆರಂಭಿಸಿದ್ದರಿಂದ ದೇಶದ ವಿವಿಧ ಮೂಲೆಗಳಿಂದ ಬರಲು ಯೋಜನೆ ರೂಪಿಸಲು ಪ್ರೇಕ್ಷಕರಿಗೆ ಆಗಲಿಲ್ಲ. ಮೊದಲ ಪಂದ್ಯಕ್ಕೆ ಕೇವಲ ಆರು ವಾರಗಳ ಹಿಂದೆಯಷ್ಟೇ (ಆ. 25ರಂದು) ಮೊದಲ ಹಂತದ ಟಿಕೆಟ್ ಮಾರಾಟ ಆರಂಭವಾಗಿದ್ದೂ ಕ್ರೀಡಾಂಗಣ ಬಣಬಣ ಎನ್ನಲು ಕಾರಣ ಎಂದೆನ್ನಲಾಗಿದೆ. ಪಂದ್ಯದ ಸಂದರ್ಭದಲ್ಲಿ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್‌ ಶಾ ಅವರು ಕಾಣಿಸಿಕೊಂಡರೂ, ಸುತ್ತಮುತ್ತಲಿನ ಆಸನಗಳು ಕಾಲಿ ಉಳಿದಿದ್ದವು. ಪಂದ್ಯ ಆರಂಭವಾಗಿ ಬಹಳಾ ಹೊತ್ತಿನ ನಂತರ ಅಹಮದಾಬಾದ್‌ನ ಸ್ಥಳೀಯ ಜನರು ಕ್ರೀಡಾಂಗಣದತ್ತ ಬಂದರು. ಆದರೂ ಕ್ರೀಡಾಂಗಣದ ಅರ್ಧದಷ್ಟೂ ತುಂಬಲಿಲ್ಲ ಎಂದು ಕೆಲವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕ್ರೀಡಾಂಗಣ ಕಾಲಿ ಇರುವ ಕುರಿತು ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಅವರು ಮಾತನಾಡಿ, ‘ಮೊದಲ ಪಂದ್ಯ ಭಾರತ ತಂಡದ್ದಾಗಿರದ ಕಾರಣ ಸ್ಥಳೀಯ ಪ್ರೇಕ್ಷಕರ ಕೊರತೆ ಕಾಣಿಸುವಂತಿದೆ’ ಎಂದಿದ್ದರು. 2011ರಲ್ಲಿ ಭಾರತದಲ್ಲಿ ಆಯೋಜನೆಗೊಂಡಿದ್ದ ವಿಶ್ವಕಪ್ ಕ್ರಿಕೆಟ್‌ ಸಂದರ್ಭದಲ್ಲೂ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ 22 ಸಾವಿರ ಪ್ರೇಕ್ಷಕರು ಕ್ರೀಡಾಂಗಣದಲ್ಲಿದ್ದರು ಎಂಬ ಸಂಗತಿಯನ್ನು ಕ್ರಿಕೆಟ್ ಪ್ರೇಮಿಗಳು ಹಂಚಿಕೊಂಡಿದ್ದಾರೆ. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಹಿಡಿದು ಕ್ರೀಡಾಂಗಣ ಪ್ರವೇಶಿಸಿದ್ದರು. ಪ್ರೇಕ್ಷಕರು ಕರತಾಡನದ ಮೂಲಕ ಅವರನ್ನು ಸ್ವಾಗತಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ ಪ್ರಿಯರಿಗೆ ಧನ್ಯವಾದ ಹೇಳಿದ ಅವರು, ವಿಶ್ವಕಪ್‌ನಲ್ಲಿ ವಿಶೇಷವಾದದ್ದನ್ನು ಮಾಡಿ ತೋರಿಸುವ ಭರವಸೆ ನೀಡಿದ್ದನ್ನು ಕೆಲವರು ನೆನಪಿಸಿಕೊಂಡಿದ್ದಾರೆ. ’ ? . #CWC2023 # ../vg35JCA4JQ ಭಾರತದಲ್ಲಿ 2011ರ ವಿಶ್ವಕಪ್ ಕ್ರಿಕೆಟ್‌ನ ಆರಂಭದಲ್ಲಿ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರಿಂದ ದೊಡ್ಡ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರಸಮಂಜರಿ ಕಾರ್ಯಕ್ರಮವನ್ನು ಪ್ರೇಕ್ಷಕರು ಸವಿದಿದ್ದರು. ಆದರೆ ಈ ಬಾರಿ ಪಂದ್ಯದ ಹಿಂದಿನ ದಿನ ತಂಡಗಳ ನಾಯಕರ ಸುದ್ದಿಗೋಷ್ಠಿ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮ ಇಲ್ಲದಿರುವ ಕುರಿತೂ ಜಾಗತಿಕ ಕ್ರಿಕೆಟ್ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೆದರ್ಲೆಂಡ್ಸ್ ವಿರುದ್ಧ ತನ್ನ ಚೊಚ್ಚಲ ಪಂದ್ಯ ಆಡಲಿದೆ. ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ, ‘ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ನಡುವೆ ದಶಕಗಳಿಂದ ವೈಮನಸ್ಸು ಇದ್ದರೂ ನಮ್ಮ ತಂಡ ಆಡುವ ಎಲ್ಲಾ ಪಂದ್ಯಗಳ ಬಹುತೇಕ ಟಿಕೆಟ್‌ಗಳು ಮಾರಾಟವಾಗಿವೆ. ಭಾರತದ ಪ್ರೇಕ್ಷಕರು ನಮ್ಮ ತಂಡದ ಆಟ ನೋಡಲು ಕಾತುರರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ' ' /, . .… ../6WO7UCdrTJ ‘ಇತ್ತೀಚಿನ ದಿನಗಳಲ್ಲಿ 50 ಓವರ್‌ಗಳ ಕ್ರಿಕೆಟ್‌ಗೆ ಯುವ ಸಮುದಾಯ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಶಾಲಾ ಕಾಲೇಜು ಮಕ್ಕಳಿಗೆ ಉಚಿತವಾಗಿ ಟಿಕೆಟ್ ವಿತರಿಸುವ ಮೂಲಕ ಯುವಜನತೆ ವಿಶ್ವಕಪ್ ಕ್ರಿಕೆಟ್‌ ಸವಿಯುವಂತಾಗಬೇಕು. ಆಟಗಾರರೂ ತುಂಬಿದ ಕ್ರೀಡಾಂಗಣದಲ್ಲಿ ಆಡುವಂತಾಗಬೇಕು‘ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ತಮ್ಮ ಎಕ್ಸ್‌ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. , . , . 50 , … ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.