2023: ’ಪಠಾಣ್’ ಚಿತ್ರದ ಪೋಸ್ಟರ್ ಮೂಲಕ ರಿಂಕು ಅವರನ್ನು ಅಭಿನಂದಿಸಿದ ಶಾರುಖ್ ಮುಂಬೈ: ನಿನ್ನೆ(ಏ.9) ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಟ್ಟ ರಿಂಕು ಸಿಂಗ್ ಅವರು ಐಪಿಎಲ್ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದರು. ಈಗ ಕೆಕೆಆರ್ ತಂಡದ ಮಾಲೀಕರಲ್ಲಿ ಒಬ್ಬರಾದ ಬಾಲಿವುಡ್ ಮೇರು ನಟ ಶಾರುಖ್‌ ಖಾನ್ ಅವರು ವಿಶೇಷ ರೀತಿಯಲ್ಲಿ ರಿಂಕು ಅವರನ್ನು ಅಭಿನಂದಿಸಿದ್ದಾರೆ. ಶಾರುಖ್ ಅವರು ಟ್ವಿಟರ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ತಮ್ಮ ’ಪಠಾಣ್’ ಚಿತ್ರದ ಪೋಸ್ಟರ್ ಒಂದನ್ನು ರಿಂಕು ಸಿಂಗ್ ಅವರ ಹೆಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಪಾತ್ರಧಾರಿ ಶಾರುಖ್‌ ಖಾನ್ ದೇಹಕ್ಕೆ ರಿಂಕು ಸಿಂಗ್ ಅವರ ತಲೆಯನ್ನು ಎಡಿಟ್‌ಮಾಡಲಾಗಿದೆ. 'ಎಂಥಾ ಆವೇಶ ರಿಂಕು!’ ಎಂಬ ಸಾಲು ಬರೆದಿದ್ದಾರಲ್ಲದೆ ಇದರಲ್ಲಿ ಕೆಕೆಆರ್ ಆಟಗಾರರಾದ ನಿತೀಶ್ ರಾಣಾ, ವೆಂಕಟೇಶ್ ಅಯ್ಯಾರ್ ಅವರನ್ನೂ ಲಗತ್ತಿಸಿ ನೀವೆಲ್ಲ ಪ್ರಿಯರಾದವರು. ನಿಮಗೆ ಶುಭವಾಗಲಿ’ ಎಂಬ ತಲೆಬರಹದೊಂದಿಗೆ ಪೋಸ್ಟರ್ ಹಂಚಿಕೊಂಡಿದ್ದಾರೆ. ಇಂದು(ಏ.10) ಆ ಪೋಸ್ಟರ್‌ ಅನ್ನು ರಿಂಕು ಅವರು ಹಂಚಿಕೊಂಡು ಶಾರುಖ್ ಅವರ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದ ತಿಳಿಸಿದ್ದಾರೆ. 🥹♥️ & 🙏🏻 ://./ ಹೆಚ್ಚಿನ ಓದಿಗಾಗಿ: 6,6,6,6,6: ಧೋನಿ ಸಾಧನೆಯನ್ನೇ ಮೀರಿಸಿದ ರಿಂಕು ಸಿಂಗ್ 2023: ಗುಜರಾತ್‌ಗೆ ಆಘಾತ, ಕೋಲ್ಕತ್ತ ನೈಟ್ ರೈಡರ್ಸ್‌ಗೆ ಐತಿಹಾಸಿಕ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.