2023 : ಲಖನೌಗೆ 213 ರನ್‌ಗಳ ಗೆಲುವಿನ ಗುರಿ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಕ್ರಿಕೆಟ್‌ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 20 ಒವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 212 ರನ್‌ಗಳಿಸಿದೆ. ಈ ಮೂಲಕ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ 213 ರನ್‌ಗಳ ಗೆಲುವಿನ ಗುರಿ ನೀಡಿದೆ. @faf1307 79- 🔝 # # 👌👌 🔽 ../BCwPejpx6w ಟಾಸ್ ಗೆದ್ದು ಬೌಲಿಂಗ್‌ ಆಯ್ದುಕೊಂಡ ಲಖನೌ ಆರ್‌ಸಿಬಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್‌ ಆರಂಭಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಪವರ್‌ ಪ್ಲೆನಲ್ಲಿ ಉತ್ತಮ ಆಟ ಪ್ರದರ್ಶಿಸಿತು. ಡುಪ್ಲೆಸಿ ಮತ್ತು ವಿರಾಟ್ ಕೊಹ್ಲಿ ತಂಡ ಉತ್ತಮ ಅಡಿಪಾಯ ಹಾಕಿದರು. ವಿರಾಟ್ ಕೊಹ್ಲಿ 61 ರನ್‌ಗಳಿಗೆ ಔಟಾದರು. ನಂತರ ಬಂದ ಮ್ಯಾಕ್ಸ್‌ವೆಲ್‌ ಕೂಡ ಅರ್ಧ ಶತಕ ದಾಖಲಿಸಿ 59 ರನ್‌ಗಳಿಸಿದರು ನಾಯಕ ಡುಪ್ಲೆಸಿ ಅಜೇಯ 79 ರನ್‌ಗಳಿಸಿದರು. ಲಖನೌ ಪರ ಅಮಿತ್‌ ಮಿಶ್ರಾ, ಮಾರ್ಕ್‌ ಹುಡ್‌ ತಲಾ ಒಂದು ವಿಕೆಟ್‌ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.