2023 : ಮುಂಬೈಗೆ 173 ರನ್‌ಗಳ ಗೆಲುವಿನ ಗುರಿ ನವದೆಹಲಿ: ಐಪಿಎಲ್‌ ಕ್ರಿಕೆಟ್‌ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಡೆ‌ಲ್ಲಿ ಕ್ಯಾಪಿಟಲ್ಸ್‌ ತಂಡ 20 ಒವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 172 ರನ್‌ಗಳಿಸಿದೆ. ಮುಂಬೈಗೆ ಗೆಲ್ಲಲು 173 ರನ್‌ಗಳ ಗೆಲುವಿನ ಗುರಿ ನೀಡಿದೆ ದೆಹಲಿ ತಂಡ. - @akshar2026 🔝 # # 👌👌 🔽 ../ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಎರಡು ತಂಡಗಳು ಇಲ್ಲಿ ಎದುರಾದವು. ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ತಂಡ ಮೊದಲ ಪವರ್‌ ಪ್ಲೆನಲ್ಲಿ ಉತ್ತಮ ಆಟ ಪ್ರದರ್ಶಿಸಿತು. ಪೃಥ್ವಿ ಶಾ, ಮನಿಷ್‌ ಪಾಂಡೆ ಉತ್ತಮ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ನಾಯಕ ವಾರ್ನರ್‌ ಏಕಾಂಗಿಯಾಗಿ ಹೋರಾಡಿ ಅರ್ಧ ಶತಕಗಳಿಸಿದರು. ವಾರ್ನರ್‌ 51, ಅಕ್ಷರ್‌ 54 ರನ್‌ಗಳಿಸಿದರು. ಚಾವ್ಲಾ, ಜಿಸನ್‌ ತಲಾ ಮೂರು ವಿಕೆಟ್‌ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.