2023 | ಗುಜರಾತ್‌ಗೆ 154ರನ್‌ಗಳ ಗುರಿ ನೀಡಿದ ಪಂಜಾಬ್‌ ಮೊಹಾಲಿ: ಮೊಹಾಲಿಯಲ್ಲಿ ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 153 ರನ್‌ ಗಳಿಸಿದೆ. ಪಂದ್ಯದಲ್ಲಿ ಗುಜರಾತ್‌ ತಂಡ ಟಾಸ್‌ ಗೆದ್ದರೂ, ಮೊದಲು ಬ್ಯಾಟ್‌ ಮಾಡುವ ಅವಕಾಶ ಪಂಜಾಬ್‌ ತಂಡಕ್ಕೆ ಒಲಿದಿತ್ತು. ಆದರೆ, ಪಂಜಾಬ್‌ ತಂಡದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಮ್ಯಾಟ್‌ ಶಾರ್ಟ್‌ 36 (24), ಜಿತೇಶ್‌ ಶರ್ಮಾ 25 (23) ತಾಳ್ಮೆಯ ಆಟ ಪ್ರದರ್ಶಿಸಿದರು. ಶಾರೂಖ್‌ ಖಾನ್‌ ಕೇವಲ 9 ಎಸೆತಗಳಲ್ಲಿ 22ರನ್‌ ಗಳಿಸಿ ಮಿಂಚಿದರು. ಅಂತಿಮವಾಗಿ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 153ರನ್‌ ಗಳಿಸಿತು. ಗುಜರಾತ್‌ ಪರ ಮೋಹಿತ್‌ ಶರ್ಮಾ 4 ಓವರ್‌ಗಳಲ್ಲಿ 18 ರನ್‌ ನೀಡಿ 2 ವಿಕೆಟ್‌ ಪಡೆದು ಗಮನಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.