2023| ಹುರಿದುಂಬಿಸಲು ಬಂದ ಗ್ಲೆನ್ ಗೆಳೆಯರು ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬಾಲ್ಯದ ಗೆಳೆಯರು ಉದ್ಯಾನನಗರಿಗೆ ಬಂದಿದ್ದಾರೆ. ಮ್ಯಾಕ್ಸ್‌ವೆಲ್ ಅವರ ನಾಲ್ವರು ಗೆಳೆಯರಾದ ಮೆಕ್ಯಾನಿಕಲ್ ಫಾರ್ಮರ್‌ ಆಗಿರುವ ಅಂಥೋನಿ ಡೇವಿಸ್, ಶಾಲಾ ಶಿಕ್ಷಕ ಸಹೋದರರಾದ ಬ್ರೆಂಡನ್ ಮತ್ತು ನೇಥನ್ ವಾಲ್ಶ್ ಮತ್ತು ಎಲೆಕ್ಟ್ರಿಷಿಯನ್ ಆಗಿರುವ ಆ್ಯರನ್ ಡ್ಯಾನಿಲ್ಸ್‌ ಅವರು ಬಂದಿದ್ದಾರೆ. ‘ಗ್ಲೆನ್ ಅವರು 11–12ನೇ ವಯಸ್ಸಿನಲ್ಲಿಯೇ ಪ್ರತಿಭಾನ್ವಿತರಾಗಿದ್ದರು. ಅವರ ಸಕಾರಾತ್ಮಕ ಗುಣ. ಚೈತನ್ಯಭರಿತ ನಡವಳಿಕೆಗಳು ಹಾಗೂ ದಯಾಗುಣಗಳು ಅವರನ್ನು ಉತ್ತಮ ವ್ಯಕ್ತಿಯನ್ನಾಗಿಸಿವೆ. ಬಾಲ್ಯದಿಂದಲೂ ನಾವು ಜೊತೆಗಿದ್ದೇವೆ’ ಎಂದು ಅಂಥೋನಿ ಡೇವಿಸ್ ಆರ್‌ಸಿಬಿಯ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದರು. ‘ಗ್ಲೆನ್ ಮತ್ತು ನಾನು ಜೂನಿಯರ್ ಹಂತದಲ್ಲಿ ಜೊತೆಗೆ ಆಡಿದ್ದೇವೆ. ವಿಕ್ಟೋರಿಯನ್ 15 ವರ್ಷ ಹಾಗೂ 19 ವರ್ಷದೊಳಗಿನವರ ತಂಡದಲ್ಲಿಯೂ ಆಡಿದ್ದೆವು. ಅವರಲ್ಲಿ ಪ್ರತಿಭೆಯೂ ಇದೆ ಹಾಗೂ ಅಪಾರವಾದ ಕಾರ್ಯತತ್ಪರತೆಯೂ ಇದೆ’ ಎಂದು ಬ್ರೆಂಡನ್ ಹೇಳಿದರು. ಶನಿವಾರದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 14 ಎಸೆತಗಳಲ್ಲಿ 24 ರನ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.