ಲಖನೌ ತಂಡಕ್ಕೆ ಅರ್ಪಿತ್ ಸೇರ್ಪಡೆ ಲಖನೌ (ಪಿಟಿಐ): ಹಿಮಾಲಚಪ್ರದೇಶದ ಬಲಗೈ ವೇಗದ ಬೌಲರ್ ಅರ್ಪಿತ್ ಗುಲೇರಿಯಾ ಅವರನ್ನು ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ತಂಡದಲ್ಲಿದ್ದ ಮಯಂಕ್ ಯಾದವ್ ಅವರು ಗಾಯಗೊಂಡಿದ್ದಾರೆ. ಅವರ ಬದಲಿಗೆ ಅರ್ಪಿತ್ ಸ್ಥಾನ ಪಡೆದಿದ್ದಾರೆ. ಅವರಿಗೆ ಲಖನೌ ತಂಡವು ₹ 20 ಲಕ್ಷ ಮೌಲ್ಯ ನೀಡಿದೆ. ಅರ್ಪಿತ್ ಅವರು 15 ಪ್ರಥಮ ದರ್ಜೆ ಹಾಗೂ 12 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಮವಾಗಿ 44 ಹಾಗೂ 11 ವಿಕೆಟ್‌ಗಳನ್ನು ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.