ಉದ್ಯೋಗಾವಕಾಶ ಅಲ್ಲಲ್ಲಿ.... ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್, ಸೇನಾಪಡೆ, ಸಶಸ್ತ್ರ ಸೀಮಾ ಬಲ, ಟೀ ಬೋರ್ಡ್ ಆಫ್ ಇಂಡಿಯಾ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಎಲ್.ಐ.ಸಿ.ಯಲ್ಲಿ (ಸೌತ್ ಸೆಂಟ್ರಲ್ ಜೋನ್, ಹೈದರಾಬಾದ್) 2524 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7-7-2013. ಹುದ್ದೆ ವಿವರ: ಡೈರೆಕ್ಟ್ ಸೇಲ್ಸ್ ಎಕ್ಸಿಕ್ಯುಟಿವ್ಸ್ (ಡಿಎಸ್‌ಇ) (ಕರ್ನಾಟಕದ ಅಭ್ಯರ್ಥಿಗಳಿಗೆ ಮಾಹಿತಿ: ಬೆಂಗಳೂರು-1: 228 ಹುದ್ದೆ, ಬೆಂಗಳೂರು-2: 246 ಹುದ್ದೆ, ಬೆಳಗಾವಿ: 128 ಹುದ್ದೆ, ರಾಯಚೂರು: 112 ಹುದ್ದೆ, ಶಿವಮೊಗ್ಗ: 121 ಹುದ್ದೆ, ಉಡುಪಿ: 246 ಹುದ್ದೆ, ಮೈಸೂರು: 103 ಹುದ್ದೆ, ಧಾರವಾಡ: 105 ಹುದ್ದೆ) ವಿದ್ಯಾರ್ಹತೆ: ಪದವಿ. ಮಾರ್ಕೆಟಿಂಗ್/ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿದವರಿಗೆ ಆದ್ಯತೆ. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಅರ್ಜಿ ಶುಲ್ಕ: ರೂ 100 ಇತರ ಮಾಹಿತಿಗೆ .. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್.ಬಿ.ಐ.ನಲ್ಲಿ 17 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-7-2013. ಹುದ್ದೆ ವಿವರ: ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ ಅಧಿಕಾರಿ) ವೇತನ ಶ್ರೇಣಿ: ರೂ 14,500- 25,700 ವಿದ್ಯಾರ್ಹತೆ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ (ಪದವಿಯಲ್ಲಿ ಇಂಗ್ಲಿಷ್ ಐಚ್ಛಿಕ ವಿಷಯ ಆಗಿರಬೇಕು). ಭಾಷಾಂತರದಲ್ಲಿ ಪ್ರಾವೀಣ್ಯ ಹೊಂದಿರಬೇಕು. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ (11-8-2013) ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಅರ್ಜಿ ಶುಲ್ಕ: ರೂ 200 ಇತರ ಮಾಹಿತಿಗೆ : ://... ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ ಐ.ಟಿ.ಬಿ.ಪಿ.ಯಲ್ಲಿ 11 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-7-2013. ಹುದ್ದೆ ವಿವರ: ಡೆಪ್ಯುಟಿ ಜಡ್ಜ್ ಅಟಾರ್ನಿ ಜನರಲ್/ ಡೆಪ್ಯುಟಿ ಕಮಾಂಡೆಂಟ್ ವೇತನ ಶ್ರೇಣಿ: ರೂ 15,600- 39,100. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಪರ್ಸನಲ್), ಡೈರೆಕ್ಟರೇಟ್ ಜನರಲ್ ಐಟಿಬಿಪಿ, ಎಂಎಚ್‌ಎ/ ಭಾರತ ಸರ್ಕಾರ, ಲೋಧಿ ರಸ್ತೆ, ಬ್ಲಾಕ್- 2, ಸಿಜಿಒ ಕಾಂಪ್ಲೆಕ್ಸ್, ನವದೆಹಲಿ- 110 003 ಇತರ ಮಾಹಿತಿಗೆ ://.. ಸೇನಾಪಡೆ ಸೇನಾಪಡೆಯಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-8-2013. ಹುದ್ದೆ ವಿವರ: ಎಸ್‌ಎಸ್‌ಸಿ ಆಫೀಸರ್ ಲಾ ಗ್ರ್ಯಾಜುಯೇಟ್ ವೇತನ ಶ್ರೇಣಿ: ರೂ 15,600- 39,100. ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಎಲ್‌ಎಲ್‌ಬಿ ಪದವಿ (ಪದವಿ ಬಳಿಕ ಮೂರು ವರ್ಷ) ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 27 ವರ್ಷ. ವಿಳಾಸ: ಡೈರೆಕ್ಟರೇಟ್ ಜನರಲ್ ಆಫ್ ರೆಕ್ರೂಟಿಂಗ್, ಆರ್‌ಟಿಜಿ ಜೆಎಜಿ ಎಂಟ್ರಿ ಎ.ಜಿ. ಬ್ರಾಂಚ್, ಆರ್ಮಿ ಹೆಡ್‌ಕ್ವಾರ್ಟರ್ಸ್, ವೆಸ್ಟ್ ಬ್ಲಾಕ್- 111, ಆರ್.ಕೆ.ಪುರಂ, ನವದೆಹಲಿ- 110 066 ಇತರ ಮಾಹಿತಿಗೆ ://.../ ಸಶಸ್ತ್ರ ಸೀಮಾ ಬಲ ಎಸ್.ಎಸ್.ಬಿ.ಯಲ್ಲಿ 810 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-7-2013. ಹುದ್ದೆ ವಿವರ: ಕಾನ್‌ಸ್ಟೆಬಲ್ (ಟ್ರೇಡ್ಸ್‌ಮನ್) ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 18, ಗರಿಷ್ಠ 23 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ವಿಳಾಸ: ದಿ ಇನ್‌ಸ್ಪೆಕ್ಟರ್ ಜನರಲ್, ಸಶಸ್ತ್ರ ಸೀಮಾ ಬಲ, ಫ್ರಾಂಟಿಯರ್ ಹೆಡ್‌ಕ್ವಾರ್ಟರ್ಸ್, ರಾಣಿಕೇತ್ ಸೇವಾ ಭವನ್ (ಗಾಣಿಯ ದಿಯೋಲಿ), ಸರ್ದಾರ್ ಬಜಾರ್ ಪೋಸ್ಟ್, ಅಲ್ಮೋರಾ ಜಿಲ್ಲೆ, ಉತ್ತರಾಖಂಡ- 263 645 ಹಾಗೂ ದಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್, ಸಶಸ್ತ್ರ ಸೀಮಾ ಬಲ, ಸೆಕ್ಟರ್ ಹೆಡ್ ಕ್ವಾರ್ಟರ್ಸ್ ತೇಜ್‌ಪುರ, ತೇಜ್‌ಪುರ ಕಾಲೇಜ್ ಸಮೀಪ, ತೇಜ್‌ಪುರ ಪೋಸ್ಟ್, ಸೋನಿತ್‌ಪುರ ಜಿಲ್ಲೆ, ಅಸ್ಸಾಂ- 734 428 ಇತರ ಮಾಹಿತಿಗೆ ... ಟೀ ಬೋರ್ಡ್ ಆಫ್ ಇಂಡಿಯಾ 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-7-2013. ಹುದ್ದೆ ವಿವರ: ಅಸಿಸ್ಟೆಂಟ್ ಡೈರೆಕ್ಟರ್ ವೇತನ ಶ್ರೇಣಿ: ರೂ 15,600- 39,100 ವಿದ್ಯಾರ್ಹತೆ: ಪದವಿ. ಅಗ್ರಿಕಲ್ಚರ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ ಮಾಡಿದವರಿಗೆ ಆದ್ಯತೆ ವಯೋಮಿತಿ: 45 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಸೆಕ್ರೆಟರಿ, ಟೀ ಬೋರ್ಡ್ ಆಫ್ ಇಂಡಿಯಾ, 14, ಬಿ.ಟಿ.ಎಂ. ಸರಾನಿ (ಬ್ರೆಬೌರ್ನ್ ರಸ್ತೆ), ಕೋಲ್ಕತ್ತ- 700 001 ಇತರ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.