ಬೇರಿನ ಬೆಳವಣಿಗೆ ಸಾಮಗ್ರಿ: ಲೋಟ, ನೀರು, ಕಡ್ಡಿಗಳು, ಈರುಳ್ಳಿ. ವಿಧಾನ: 1. ಚಿತ್ರದಲ್ಲಿ ತೋರಿಸಿದಂತೆ ಈರುಳ್ಳಿಗೆ ಮೂರು ಚೂಪಾದ ಹಲ್ಲುಕಡ್ಡಿ ಚುಚ್ಚಿ ನೀರು ತುಂಬಿದ ಲೋಟದ ಮೇಲಿಡಿ. 2. ಈರುಳ್ಳಿಯ ಕೆಳಗಿನ ಕಾಲು ಭಾಗವು ನೀರಿನಲ್ಲಿ ಮುಳುಗಿರಲಿ. 3. ಮೂರರಿಂದ ನಾಲ್ಕು ದಿವಸಗಳ ನಂತರ ನೀರಿನಲ್ಲಿರುವ ಈರುಳ್ಳಿಯನ್ನು ಗಮನಿಸಿ. ಪ್ರಶ್ನೆ: ಈರುಳ್ಳಿಯಲ್ಲಿ ಯಾವ ಬದಲಾವಣೆ ನೋಡಬಹುದು? ಉತ್ತರ: ಈರುಳ್ಳಿಯ ತಳಭಾಗದಿಂದ ಹಲವಾರು ತೆಳ್ಳನೆಯ ಹಾಗೂ ಬಿಳಿ ಬೇರುಗಳು ಬೆಳೆಯುತ್ತಿರುವುದು ಕಾಣಿಸುತ್ತದೆ. ಈ ಬೇರುಗಳ ತುದಿ ಭಾಗವನ್ನು ಮೈಟಾಸಿಸ್ (ಜಿಠಿಟಜಿ) ಎಂಬ ಕೋಶ ವಿಭಜನೆಯನ್ನು ಅಭ್ಯಾಸ ಮಾಡಲು ಜೀವವಿಜ್ಞಾನ ಪ್ರಯೋಗಾಲಯಗಳಲ್ಲಿ ಬಳಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.