ಉದ್ಯೋಗಾವಕಾಶ ಅಲ್ಲಲ್ಲಿ.... ಕೆನರಾ ಬ್ಯಾಂಕ್, ಭಾರತ ಕ್ರೀಡಾ ಪ್ರಾಧಿಕಾರ, ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೆನರಾ ಬ್ಯಾಂಕ್ 550 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-9-2013. ಹುದ್ದೆ ವಿವರ: 1) ಮ್ಯಾನೇಜರ್- 450 ಹುದ್ದೆ ವೇತನ ಶ್ರೇಣಿ: ರೂ 19,400- 28,100 ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ. ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ ಪದವಿ 2) ಸೀನಿಯರ್ ಮ್ಯಾನೇಜರ್ (ಕ್ರೆಡಿಟ್)-100 ಹುದ್ದೆ ವೇತನ ಶ್ರೇಣಿ: ರೂ 25,700- 31,500 ವಯೋಮಿತಿ: ಕನಿಷ್ಠ 27 ವರ್ಷ, ಗರಿಷ್ಠ 40 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಪದವಿ ಅರ್ಜಿ ಶುಲ್ಕ: ರೂ 500 ಆಯ್ಕೆ ವಿಧಾನ: ಗುಂಪು ಚರ್ಚೆ ಹಾಗೂ ಸಂದರ್ಶನ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 12-9-2013 ವಿಳಾಸ: ಕೆನರಾ ಬ್ಯಾಂಕ್ ರೆಕ್ರೂಟ್‌ಮೆಂಟ್ ಸೆಲ್ (ಪ್ರಾಜೆಕ್ಟ್-3/2013), ಪೋಸ್ಟ್ ಬಾಕ್ಸ್ ಸಂಖ್ಯೆ-6648, ಬೆಂಗಳೂರು- 560 002 ಹೆಚ್ಚಿನ ಮಾಹಿತಿಗೆ ://.. ಭಾರತ ಕ್ರೀಡಾ ಪ್ರಾಧಿಕಾರ ಎಸ್.ಎ.ಐ.ನಲ್ಲಿ 54 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-9-2013. ಹುದ್ದೆ ವಿವರ: 1) ಕನ್ಸಲ್‌ಟೆಂಟ್ (ಅಕಾಡೆಮಿಕ್ಸ್)-1 ಹುದ್ದೆ, ವೇತನ: ರೂ 1,50,000, 2) ಅಸಿಸ್ಟೆಂಟ್ ಕನ್ಸಲ್‌ಟೆಂಟ್ (ಅಕಾಡೆಮಿಕ್ಸ್)-3 ಹುದ್ದೆ, ವೇತನ: ರೂ 80,000, 3) ಅಸಿಸ್ಟೆಂಟ್ ಪ್ರೊಫೆಸರ್-29 ಹುದ್ದೆ, ವೇತನ: ರೂ 60,000, 4) ಅಸಿಸ್ಟೆಂಟ್ ಪ್ರೊಫೆಸರ್-21 ಹುದ್ದೆ, ವೇತನ: ರೂ 60,000 ಅರ್ಜಿ ಶುಲ್ಕ: ರೂ 500. ಭಾರತ ಕ್ರೀಡಾ ಪ್ರಾಧಿಕಾರ ಬೆಂಗಳೂರು ಕೇಂದ್ರದಲ್ಲೂ ಹುದ್ದೆಗಳಿವೆ ಆಯ್ಕೆ ವಿಧಾನ: ಸಂದರ್ಶನ ವಿಳಾಸ: ದಿ ಸೆಕ್ರೆಟರಿ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ), ಜವಾಹರಲಾಲ್ ನೆಹರೂ ಸ್ಟೇಡಿಯಂ ಕಾಂಪ್ಲೆಕ್ಸ್ (ಈಸ್ಟ್ ಗೇಟ್), ಎರಡನೇ ಮಹಡಿ, ಲೋಧಿ ರಸ್ತೆ, ನವದೆಹಲಿ- 110 003 ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ ://.. ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್ ಹೈದರಾಬಾದ್‌ನಲ್ಲಿರುವ ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್ ಘಟಕಕ್ಕೆ 242 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-9-2013. ಹುದ್ದೆ ವಿವರ: 1) ಸೂಪರ್‌ವೈಸರ್ (ಎಸ್-1)-ಹುದ್ದೆ 17, ವೇತನ ಶ್ರೇಣಿ: ರೂ 12,300- 25,400, ವಯೋಮಿತಿ: 18-30 ವರ್ಷ. 2) ಆಫೀಸ್ ಅಸಿಸ್ಟೆಂಟ್/ ಸೆಕ್ರೆಟರಿಯಲ್ ಅಸಿಸ್ಟೆಂಟ್-ಹ್ದ್ದುದೆ 24, 3) ಹಿಂದಿ ಟೈಪಿಸ್ಟ್-ಹುದ್ದೆ 1, ವಯೋಮಿತಿ: 18-28 ವರ್ಷ. 4) ವರ್ಕ್‌ಮನ್-ಹುದ್ದೆ 100. ವೇತನ ಶ್ರೇಣಿ: ರೂ 5,200- 20,200, ವಯೋಮಿತಿ: 18-25 ವರ್ಷ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಪೋಸ್ಟ್ ಬಾಕ್ಸ್ ನಂ. 3076, ಲೋಧಿ ರಸ್ತೆ, ನವದೆಹಲಿ- 110 003 ಹೆಚ್ಚಿನ ಮಾಹಿತಿಗೆ ://..// ಅಥವಾ ://.. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿ.ಐ.ಎಸ್.ಎಫ್.ನಲ್ಲಿ 112 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-9-2013. ಹುದ್ದೆ ವಿವರ: ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) (ಸ್ಟೆನೊ)-104 ಹುದ್ದೆಗಳು ವೇತನ ಶ್ರೇಣಿ: ರೂ 5,200- 20,200 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಇಂಟರ್‌ಮೀಡಿಯಟ್ ಅಥವಾ ಸೀನಿಯರ್ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ (10+2) ಅರ್ಜಿ ಶುಲ್ಕ: ರೂ 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆ ವಿಳಾಸ: ಡಿಐಜಿ, ಸಿಐಎಸ್‌ಎಫ್ (ದಕ್ಷಿಣ ವಲಯ), ರಾಜಾಜಿ ಭವನ, `ಡಿ' ಬ್ಲಾಕ್, ಬೆಸೆಂಟ್ ನಗರ, ಚೆನ್ನೈ-90 ಹೆಚ್ಚಿನ ಮಾಹಿತಿಗೆ ://.. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿ.ಎಸ್.ಎಫ್.ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-9-2013. ಹುದ್ದೆ ವಿವರ: ಕಾನ್‌ಸ್ಟೆಬಲ್ (ಸ್ಟೋರ್‌ಮನ್) ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ಅರ್ಜಿ ಶುಲ್ಕ: ರೂ 50 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ದಿ ಇನ್‌ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಹೆಡ್ ಕ್ವಾರ್ಟರ್ಸ್‌, ಬಿಎಸ್‌ಎಫ್, ಬೆಂಗಳೂರು, ಯಲಂಹಕ, ಬೆಂಗಳೂರು-560064 ಹೆಚ್ಚಿನ ಮಾಹಿತಿಗೆ ://.. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಐ.ಒ.ಸಿ.ಯಲ್ಲಿ 250 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-9-2013. ಹುದ್ದೆ ವಿವರ: ಅಸಿಸ್ಟೆಂಟ್ ಆಫೀಸರ್ಸ್‌/ಅಸಿಸ್ಟೆಂಟ್ ಎಂಜಿನಿಯರ್ಸ್‌ ವೇತನ: ರೂ 20,600 ವಯೋಮಿತಿ: 26 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಜಿಎಟಿಇ (ಗೇಟ್) ಪರೀಕ್ಷೆ-2013ರ ಅರ್ಹ ಅಂಕಪಟ್ಟಿ ಹೊಂದಿರಬೇಕು. ಗುಂಪು ಚರ್ಚೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.