ಹಲಗೆ ಮೇಲೆತ್ತುವ ಫ್ಲಾಸ್ಕ್ ಬೇಕಾಗುವ ಸಾಮಗ್ರಿ: ಕೊನಿಕಲ್ ಫ್ಲಾಸ್ಕ್, ಬಿರಡೆ, ಹಲಗೆ, ಬೇರಿಯಂ ಹೈಡ್ರಾಕ್ಸೈಡ್, ಅಮೋನಿಯಂ ಥಯೋಸೈನೈಡ್, ನೀರು. ವಿಧಾನ: 1. ಒಂದು ಕೊನಿಕಲ್ ಫ್ಲಾಸ್ಕಿನಲ್ಲಿ ಒಂದೊಂದು ಚಮಚೆಯಷ್ಟು ಬೇರಿಯಂ ಹೈಡ್ರಾಕ್ಸೈಡ್ (()2 ಮತ್ತು ಅಮೋನಿಯಂ ಥಯೋಸೈನೇಟ್ (NH4 ) ದ್ರಾವಣಗಳನ್ನು ತೆಗೆದುಕೊಳ್ಳಿ. 2. ಫ್ಲಾಸ್ಕಿಗೆ ಬಿರಡೆ ಹಾಕಿ ಜೋರಾಗಿ ಅಲುಗಾಡಿಸಿ. 3. ಅನಂತರ ಫ್ಲಾಸ್ಕನ್ನು ಒದ್ದೆ ಮಾಡಿದ ಒಂದು ಹಲಗೆಯ ಮೇಲೆ ಇಡಿ. ಪ್ರಶ್ನೆ 1. ಫ್ಲಾಸ್ಕನ್ನು ಅಲುಗಾಡಿಸುತ್ತಿದ್ದಾಗ ಅದರ ತಾಪಮಾನದಲ್ಲಾದ ಬದಲಾವಣೆ ಏನು? ಯಾಕೆ? 2. ಒದ್ದೆಯಾದ ಹಲಗೆಯ ಮೇಲಿಟ್ಟ ಫ್ಲಾಸ್ಕನ್ನು ಮೇಲೆತ್ತಿದಾಗ ಏನಾಗುತ್ತದೆ? ಯಾಕೆ? ಉತ್ತರ 1. ಫ್ಲಾಸ್ಕನ್ನು ಅಲುಗಾಡಿಸುತ್ತಾ ಹೋದಾಗ ಅದು ತಂಪಾಗುತ್ತಾ ಹೋಗುತ್ತದೆ. ಯಾಕೆಂದರೆ ಇಲ್ಲಿ ಅಂತರುಷ್ಣಕ ಕ್ರಿಯೆ ಜರುಗುತ್ತದೆ. 2. ಫ್ಲಾಸ್ಕನ್ನು ಒದ್ದೆಯಾದ ಹಲಗೆಯ ಮೇಲಿಟ್ಟಾಗ ಅಂತರುಷ್ಣಕ ಕ್ರಿಯೆಯಿಂದ ಹಲಗೆಯ ಮೇಲಿನ ನೀರು ಮಂಜುಗಡ್ಡೆಯಾಗಿ ಫ್ಲಾಸ್ಕನ್ನು ಹಿಡಿದುಕೊಳ್ಳುತ್ತದೆ. ಹೀಗಾಗಿ ಫ್ಲಾಸ್ಕನ್ನು ಮೇಲೆತ್ತಿದಾಗ ಹಲಗೆಯೂ ಮೇಲೇಳುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.