ಉದ್ಯೋಗಾವಕಾಶ... ಅಲ್ಲಲ್ಲಿ ಬಿ.ಆರ್.ಬಿ. ನೋಟ್ ಮುದ್ರಣ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್‌ ಲಿಮಿಟೆಡ್‌ನಲ್ಲಿ (ಬೆಂಗಳೂರು) 300 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14– 10– 2013. ಹುದ್ದೆ ಹೆಸರು: ಇಂಡಸ್ಟ್ರಿಯಲ್‌ ವರ್ಕ್ ಮನ್‌ ಗ್ರೇಡ್‌–1 (ಟ್ರೈನಿ) ವೇತನ ಶ್ರೇಣಿ: ರೂ 7000– 24,240 ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಡಿಪ್ಲೊಮಾ ಇನ್‌ ಪ್ರಿಂಟಿಂಗ್/ ಮೆಕ್ಯಾನಿಕಲ್‌ ಎಂಜಿನಿಯರಿಂಗ್/ ಇನ್‌ಸ್ಟ್ರುಮೆಂಟೇಷನ್ ಎಂಜಿನಿಯರಿಂಗ್/ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್. ಅರ್ಜಿ ಶುಲ್ಕ: ರೂ 200 ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಆನ್‌ಲೈನ್‌ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಪರೀಕ್ಷೆ ದಿನಾಂಕ: 23–11–2013 * ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ... ದಕ್ಷಿಣ ರೈಲ್ವೆ ಎಸ್.ಆರ್.ನಲ್ಲಿ 5450 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಚೆನ್ನೈ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21–10– 2013. ಹುದ್ದೆ ಹೆಸರು: ಗ್ರೂಪ್ ‘ಡಿ’ ವೇತನ ಶ್ರೇಣಿ: ರೂ 5,200– 20,200 ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ ಅರ್ಜಿ ಶುಲ್ಕ: ರೂ100 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ * ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ವಿಳಾಸ: ರೈಲ್ವೆ ನೇಮಕಾತಿ ಘಟಕ, ದಕ್ಷಿಣ ರೈಲ್ವೆ, ನಂ.5, ಮೂರನೇ ಮಹಡಿ, ಡಾ. ಪಿ.ವಿ.ಚೆರಿಯನ್ ಕ್ರೆಸೆಂಟ್‌ ರಸ್ತೆ, ಯತಿರಾಜ್‌ ಕಾಲೇಜ್‌ ಹತ್ತಿರ, ಎಗ್ಮೋರ್, ಚೆನ್ನೈ– 600 008 ಹೆಚ್ಚಿನ ಮಾಹಿತಿಗೆ ://.../ ನಾರ್ಥರ್ನ್‌ ಫ್ರಾಂಟಿಯರ್‌ ರೈಲ್ವೆ ಎನ್.ಎಫ್.ಆರ್.ನಲ್ಲಿರುವ 1230 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಅಸ್ಸಾಂ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21– 10– 2013. ಹುದ್ದೆ ಹೆಸರು: ‘ಡಿ’ ಪೋಸ್ಟ್‌ ವೇತನ ಶ್ರೇಣಿ: ರೂ 5,200– 20,200. ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ. ಅರ್ಜಿ ಶುಲ್ಕ: ರೂ 100 ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ವಿಳಾಸ: ಮುಖ್ಯಸ್ಥರು, ರೈಲ್ವೆ ನೇಮಕಾತಿ ಘಟಕ, ಸ್ಟೇಷನ್‌ ಕಾಲೊನಿ, ಪಾನ್ ಬಜಾರ್, ಗುವಾಹಟಿ, ಅಸ್ಸಾಂ– 781 001 ಹೆಚ್ಚಿನ ಮಾಹಿತಿಗೆ ://.... ನಬಾರ್ಡ್‌ ನ್ಯಾಷನಲ್‌ ಬ್ಯಾಂಕ್‌ ಫಾರ್‌ ಅಗ್ರಿಕಲ್ಚರ್ ಅಂಡ್‌ ರೂರಲ್‌ ಡೆವಲಪ್ ಮೆಂಟ್ ನಲ್ಲಿ 67 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14–10– 2013. ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಮ್ಯಾನೇಜರ್‌ ಗ್ರೇಡ್‌ ‘ಎ’ (ಆರ್ ಡಿಬಿಎಸ್‌)– 37 ಹುದ್ದೆ, ವೇತನ ಶ್ರೇಣಿ: 17,100–33,200, ವಯೋಮಿತಿ: 30 ವರ್ಷ ದಾಟಿರಬಾರದು. ವಿದ್ಯಾರ್ಹತೆ: ಶೇ 60 ಅಂಕಗಳೊಂದಿಗೆ ಎಂಜಿನಿಯರಿಂಗ್ ನಲ್ಲಿ ಪದವಿ (ಬಿ.ಇ. ಅಥವಾ ಬಿ.ಟೆಕ್). 2) ಮ್ಯಾನೇಜರ್‌ ಗ್ರೇಡ್‌ ‘ಬಿ’ (ಆರ್‌ಡಿಬಿಎಸ್‌)– 30 ಹುದ್ದೆ. ವೇತನ ಶ್ರೇಣಿ: 21,000–36,400, ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಟಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಶೇ 60 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ. ವೇತನ ಶ್ರೇಣಿ: 17,100– 33,200, ಅರ್ಜಿ ಶುಲ್ಕ: ರೂ 450 ಆಯ್ಕೆ ವಿಧಾನ: ಪ್ರಾಥಮಿಕ ಹಾಗೂ ಮುಖ್ಯ ಲಿಖಿತ ಪರೀಕ್ಷೆ ಮತ್ತು ಸಂದರ್ಶನ * ಪ್ರಾಥಮಿಕ ಪರೀಕ್ಷೆ ದಿನಾಂಕ: 21–11–2013 * ಬೆಂಗಳೂರಿನಲ್ಲೂ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ನೈವೇಲಿ ಲಿಗ್ನೈಟ್‌ ಕಾರ್ಪೊರೇಷನ್‌ ಎನ್.ಸಿ.ಎಲ್.ನಲ್ಲಿ 78 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 20–12–2013ರಿಂದ 20–1–2014ರ ನಡುವೆ ಅರ್ಜಿ ಸಲ್ಲಿಸಬೇಕು. ಹುದ್ದೆ ಹೆಸರು: ಗ್ರ್ಯಾಜುಯೇಟ್ ಎಕ್ಸಿಕ್ಯುಟಿವ್ ಟ್ರೈನಿ ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ. ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಟಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 300 ವಿಶೇಷ ಸೂಚನೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಜಿ.ಎ.ಟಿ.ಇ. (ಗೇಟ್)- 2014ರ ಪರೀಕ್ಷೆಗೆ ಹಾಜರಾಗಲು ನೋಂದಣಿ ಮಾಡಿಸಿರಬೇಕು. ಅದಕ್ಕೆ ಕೊನೆಯ ದಿನಾಂಕ: 1– 10– 2013. * ಜಿ.ಎ.ಟಿ.ಇ. ಪರೀಕ್ಷೆ 1– 2– 2014 ಹಾಗೂ 2– 3– 2014 ನಡುವೆ ನಡೆಯಲಿದೆ. ಈ ಬಗ್ಗೆ ಮಾಹಿತಿಗೆ ://... ಸಂಪರ್ಕಿಸಿ. ಆಯ್ಕೆ ವಿಧಾನ: ಗೇಟ್‌ ಪರೀಕ್ಷೆಯಲ್ಲಿ ಪಡೆದ ಅಂಕ, ಸಂದರ್ಶನ ಹಾಗೂ ಗುಂಪು ಚರ್ಚೆ. ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.