ಒಮ್ಮೆ ಪ್ರತ್ಯಕ್ಷ, ಮತ್ತೊಮ್ಮೆ ಮಾಯ ಪ್ರಶ್ನೆ: ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಊದುತ್ತಾ ಹೋದಾಗ ದ್ರಾವಣದಲ್ಲಿ ಆಗುವ ಬದಲಾವಣೆಗಳೇನು? ಯಾಕೆ? ಉತ್ತರ: ನಾವು ಊದುವ ಗಾಳಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಇರುತ್ತದೆ. ಅದು ಕ್ಯಾಲ್ಸಿಯಂ ಹೈಡ್ರಾ­ಕ್ಸೈಡ್ (()2) ಜೊತೆ ಸಂಯೋಗ ಹೊಂದಿ ನೀರಿನಲ್ಲಿ ಕರಗದೆ ಇರುವ ಕ್ಯಾಲ್ಸಿಯಂ ಕಾರ್ಬೊನೇಟ್ (CaCO3) ಆಗುತ್ತದೆ. ಹೀಗಾಗಿ ಕ್ಯಾಲ್ಸಿಯಂ ಕಾರ್ಬೊ­ನೇಟ್‌ ದ್ರಾವಣದಲ್ಲಿ ಅವಪಾತ (ಇಳಿಕೆ) ಕಾಣುತ್ತದೆ. CO2 + ()2=CaCO3 +H20 ದ್ರವ ಪದಾರ್ಥದ ಮಟ್ಟ ಕಡಿಮೆಯಾದಾಗ ಅವಪಾತ ಕಾಣಿಸಿಕೊಳ್ಳುತ್ತದೆ. ಅವಪಾತವುಳ್ಳ ದ್ರಾವಣದಲ್ಲಿ ಮತ್ತೆ ಊದಿದಾಗ (CO2 ಸೇರಿದಾಗ) ಕ್ಯಾಲ್ಷಿಯಂ ಬೈಕಾರ್ಬೊನೇಟ್ ((HCO3)2 ) ಉತ್ಪತ್ತಿಯಾಗುತ್ತದೆ. ಕ್ಯಾಲ್ಸಿಯಂ ಬೈಕಾರ್ಬೊನೇಟ್ ನೀರಿನಲ್ಲಿ ಕರಗುವುದರಿಂದ ದ್ರಾವಣವು ಮತ್ತೆ ತಿಳಿಯಾಗುತ್ತದೆ. ಬೇಕಾಗುವ ಸಾಮಗ್ರಿ: ಪ್ರನಾಳ, ಸ್ಟ್ರಾ, ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌ನ ತಿಳಿ ದ್ರಾವಣ. ವಿಧಾನ : 1. ಒಂದು ಪ್ರನಾಳದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ (()2) ದ್ರಾವಣವನ್ನು ತೆಗೆದುಕೊಳ್ಳಿ. 2. ಒಂದು ಸ್ಟ್ರಾದ ಸಹಾಯದಿಂದ ದ್ರಾವಣದಲ್ಲಿ ಊದುತ್ತಾ ಹೋಗಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.