ತಂಬೂರಿಗೇಕೆ ತಂಬೂರಿ ಕಾಯಿ? ಪ್ರಶ್ನೆ: 1. ಹಣಿಗೆಯ ಹಲ್ಲುಗಳನ್ನು ಮೀಟಿದಾಗ ಶಬ್ದ ಬರುತ್ತದೆ, ಯಾಕೆ? 2. ಹಣಿಗೆಯನ್ನು ಟೇಬಲ್‌ ಮೇಲೆ ಊರ್ಧ್ವ ಮುಖವಾಗಿಟ್ಟು ಹಲ್ಲುಗಳನ್ನು ಮೀಟಿದಾಗ ಶಬ್ದ ಹೆಚ್ಚಾಗುತ್ತದೆ, ಯಾಕೆ? 3. ಈ ವಿಧಾನವನ್ನು ಯಾವ ಉಪಕರಣಗಳಲ್ಲಿ ಕಾಣುತ್ತೀರಿ? ಬೇಕಾಗುವ ಸಾಮಗ್ರಿ ಹಣಿಗೆ, ಟೇಬಲ್. ವಿಧಾನ 1. ಚಿತ್ರದಲ್ಲಿ ತೋರಿಸಿದಂತೆ ಹಣಿಗೆಯ ಹಲ್ಲುಗಳನ್ನು ನಿಮ್ಮ ತೋರು ಬೆರಳಿನ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಮೀಟುತ್ತಾ ಹೋಗಿ. 2. ಈಗ ಹಣಿಗೆಯನ್ನು ಒಂದು ಟೇಬಲ್‌ ಮೇಲೆ ಊರ್ಧ್ವ ಮುಖವಾಗಿ ಹಿಡಿದು ಮೊದಲಿನಂತೆ ಹಣಿಗೆಯ ಹಲ್ಲುಗಳನ್ನು ಮೀಟಿರಿ. ಉತ್ತರ 1. ಹಣಿಗೆಯ ಹಲ್ಲುಗಳನ್ನು ಮೀಟಿದಾಗ ಕಂಪನಗಳು ಉತ್ಪತ್ತಿಯಾಗುತ್ತವೆ. ಕಂಪಿಸುವ ವಸ್ತು ಶಬ್ದವನ್ನು ಉತ್ಪತ್ತಿ ಮಾಡುತ್ತದೆ. 2. ಹಣಿಗೆಯನ್ನು ಗಾಳಿಯಲ್ಲಿ ಹಿಡಿದು ಹಲ್ಲುಗಳನ್ನು ಮೀಟಿದಾಗ ಹಣಿಗೆ ಮತ್ತು ಹಲ್ಲುಗಳು ಮಾತ್ರ ಕಂಪಿಸುತ್ತವೆ. ಹಣಿಗೆಯನ್ನು ಟೇಬಲ್‌ ಮೇಲೆ ಇಟ್ಟು ಹಲ್ಲುಗಳನ್ನು ಮೀಟಿದಾಗ, ಹಲ್ಲುಗಳು ಹಣಿಗೆ ಹಾಗೂ ಟೇಬಲ್ ಮೇಲೆ ಬಲವಂತದ ಕಂಪನ ಉಂಟು ಮಾಡುತ್ತವೆ. ಆಗ ಶಬ್ದದ ತೀವ್ರತೆ ಹೆಚ್ಚುತ್ತದೆ. 3. ಈ ವಿಧಾನವನ್ನು ಸಿತಾರ್‌, ಸರೋದ್‌, ವಯೊಲಿನ್ ಹಾಗೂ ತಂಬೂರಿಗಳಲ್ಲಿ ಕಾಣಬಹುದು. ಈ ಉಪಕರಣಗಳಲ್ಲಿ ಅಳವಡಿಸುವ ಮರದ/ ಲೋಹದ ಪೊಳ್ಳು ಪೆಟ್ಟಿಗೆ ಇದಕ್ಕೆ ಕಾರಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.