ಮಾಡಿ ನಲಿ ಸಾಮಗ್ರಿ ಖಾಲಿ ಪೌಡರ್ ಡಬ್ಬ ಅಥವಾ ಖಾಲಿ ಬಿಸ್ಲೇರಿ ಬಾಟಲ್, ನೀರು, ಡಬ್ಬಳ. ವಿಧಾನ 1. ಒಂದು ಖಾಲಿ ಪೌಡರ್ ಡಬ್ಬಿ ಅಥವಾ ಒಂದು ಖಾಲಿ ಬಿಸ್ಲೇರಿ ಬಾಟಲಿಯನ್ನು ತೆಗೆದುಕೊಂಡು, ಚಿತ್ರದಲ್ಲಿ ತೋರಿಸಿದಂತೆ ಕೆಳಗಡೆಗೆ ಡಬ್ಬಳದಿಂದ ಒಂದು ಚಿಕ್ಕ ರಂಧ್ರ ಮಾಡಿ. ಅದರಲ್ಲಿ ನೀರು ತುಂಬಿದಾಗ ಅದು ಹೊರ ಚಿಮ್ಮುತ್ತದೆ ಅಲ್ಲವೇ? ಪ್ರಶ್ನೆ: ರಂಧ್ರವನ್ನು ಬೆರಳಿನಿಂದ ಮುಚ್ಚಿ, ಡಬ್ಬಿ ಅಥವಾ ಬಾಟಲ್ ತುಂಬಾ ನೀರು ತುಂಬಿ ಮೇಲಿನಿಂದ ಕೆಳಗೆ ಬಿಟ್ಟಾಗ ಏನಾಗುತ್ತದೆ? ಯಾಕೆ? ಉತ್ತರ ಪ್ರತಿ ದ್ರವಕ್ಕೂ ತನ್ನದೇ ಆದ ಭಾರ ಇರುತ್ತದೆ. ಹೀಗಾಗಿ ಅದು ಒತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ನೀರು ರಂಧ್ರದ ಮೂಲಕ ಹೊರ ಚಿಮ್ಮುತ್ತದೆ. ನೀರು ತುಂಬಿದ ಡಬ್ಬ/ ಬಾಟಲಿಯನ್ನು ಕೆಳಗೆ ಬಿಟ್ಟಾಗ ಅದಕ್ಕೆ ಭಾರ ಇರುವುದಿಲ್ಲ. ಗುರುತ್ವ ಬಲವನ್ನು ವಿರೋಧಿಸಿದರೆ ಮಾತ್ರ ವಸ್ತುವಿಗೆ ಭಾರ ಬರುತ್ತದೆ. ಕೆಳಗೆ ಬೀಳುವ ಬಾಟಲಿಯಲ್ಲಿನ ನೀರಿಗೆ ಭಾರ ಇರುವುದಿಲ್ಲವಾದ್ದರಿಂದ ಅಲ್ಲಿ ಒತ್ತಡ ಸೃಷ್ಟಿಯಾಗುವುದಿಲ್ಲ. ಹೀಗಾಗಿ ನೀರು ಹೊರ ಚಿಮ್ಮುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.