ಎಲೆಯ ವಿಸ್ತಾರ ಸಾಮಗ್ರಿ: ಗ್ರಾಫ್ ಕಾಗದ, ಪೆನ್ಸಿಲ್ ವಿಧಾನ 1. ಒಂದು ಗ್ರಾಫ್ ಕಾಗದದ ಮೇಲೆ ಒಂದು ತಾಜಾ ಎಲೆಯನ್ನಿಟ್ಟು, ಸರಿ­ಯಾಗಿ ಹರಡಿ. ಎಲೆಯ ಅಂಚಿನವರೆಗೂ ಪೆನ್ಸಿಲ್‌ನಿಂದ ಗೆರೆ ಎಳೆಯಿರಿ. 2. ಎಲೆಯನ್ನು ಹೊರತೆಗೆದು ಗ್ರಾಫ್ ಕಾಗದದಲ್ಲಿ ಗೆರೆಯ ಮಧ್ಯೆ ಎಷ್ಟು ಪೂರ್ಣಚೌಕಗಳಿವೆ (ಸೆ.ಮೀ.), ಅರ್ಧ ಹಾಗೂ 3/4ಕ್ಕಿಂತ ಹೆಚ್ಚು ಭಾಗ­ವನ್ನು ಆವರಿಸಿರುವ ಚೌಕಗಳೆಷ್ಟು, ಅರ್ಧಕ್ಕಿಂತ ಕಡಿಮೆ ಚೌಕಗಳೆಷ್ಟು ಎಣಿಸಿ. ಪ್ರಶ್ನೆ: ಪೂರ್ಣ, ಮುಕ್ಕಾಲು ಹಾಗೂ ಅರ್ಧಕ್ಕೂ ಹೆಚ್ಚು ಭಾಗ ಆವರಿಸಿರುವ ಚೌಕಗಳನ್ನು ಎಣಿಸಿ ಎಲೆಯ ವಿಸ್ತಾರವನ್ನು ಕಂಡು ಹಿಡಿಯಲು ಸಾಧ್ಯವೇ? ಉತ್ತರ: ಚಿತ್ರದಲ್ಲಿ 9 ಸೆಂ.ಮೀ.ನ ಪೂರ್ಣ ಚೌಕಗಳು, 6 -ಮುಕ್ಕಾಲು ಚೌಕಗಳು ಹಾಗೂ ಅರ್ಧಕ್ಕೂ ಹೆಚ್ಚು ಭಾಗ ಆವರಿಸಿದ ಚೌಕಗಳಿವೆ. ಅಂದರೆ, ಎಲೆಯ ಒಟ್ಟು ವಿಸ್ತಾರ 15 ಚದರ ಸೆ.ಮೀ. ಬೆಳೆಯುವ ಎಲೆಯ ಬೆಳವಣಿಗೆಯನ್ನು ನಾವು ಇದರಿಂದ ತಿಳಿಯಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.