ಉದ್ಯೋಗಾವಕಾಶ ಅಲ್ಲಲ್ಲಿ......... ಕಾವೇರಿ ಗ್ರಾಮೀಣ ಬ್ಯಾಂಕ್, ಬಿಎಚ್ಇಎಲ್ (ಬೆಂಗಳೂರು), ಬಿಎಚ್ಇಎಲ್ (ಭೋಪಾಲ್), ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕರ್ನಾಟಕ ಪೋಸ್ಟಲ್ ವೃತ್ತ, ನಾರ್ಥ್ ಸೆಂಟ್ರಲ್ ರೈಲ್ವೆ ಕಾವೇರಿ ಗ್ರಾಮೀಣ ಬ್ಯಾಂಕ್‌ 716 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-12-2013. ಹುದ್ದೆ ಹೆಸರು: 1) ಅಧಿಕಾರಿ ಶ್ರೇಣಿ (1) 111 (ಜನರಲ್‌ ಬ್ಯಾಂಕಿಂಗ್): 5 ಹುದ್ದೆ. ವೇತನ: ರೂ 50,231 (ಒಟ್ಟು ಸಂಬಳ ಅಂದಾಜು), 2) ಅಧಿಕಾರಿ ಶ್ರೇಣಿ (1) 11 (ಜನರಲ್‌ ಬ್ಯಾಂಕಿಂಗ್): 24 ಹುದ್ದೆ, 3) ಅಧಿಕಾರಿ ಶ್ರೇಣಿ (1) 11 (ಚಾರ್ಟರ್ಡ್ ಅಕೌಂಟೆಂಟ್): 1 ಹುದ್ದೆ, 4) ಅಧಿಕಾರಿ ಶ್ರೇಣಿ (1) 11 (ಕಾನೂನು): 1 ಹುದ್ದೆ, 5) ಅಧಿಕಾರಿ ಶ್ರೇಣಿ (1) 11 (ಐಟಿ): 13 ಹುದ್ದೆ, 6) ಅಧಿಕಾರಿ ಶ್ರೇಣಿ (1) 11 (ಟ್ರೆಷರಿ ಮ್ಯಾನೇಜ್‌ಮೆಂಟ್): 1 ಹುದ್ದೆ. ವೇತನ: ರೂ 37,917, 7) ಅಧಿಕಾರಿ ಶ್ರೇಣಿ 1: ಹುದ್ದೆ 220, ವೇತನ: ರೂ 28,341, 8) ಆಫೀಸ್ ಅಸಿಸ್ಟೆಂಟ್: 451 ಹುದ್ದೆ, ವೇತನ: ರೂ 15,676 ಆಯ್ಕೆ ವಿಧಾನ: ಸಂದರ್ಶನ ಹಾಗೂ ಐಬಿಪಿಎಸ್ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು * ಮೈಸೂರಿನಲ್ಲಿ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://.. ಬಿಎಚ್‌ಇಎಲ್ (ಬೆಂಗಳೂರು) ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ (ಬಿಎಚ್‌ಇಎಲ್) 38 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-12-2013. ಹುದ್ದೆ ಹೆಸರು: 1) ಪ್ರಾಜೆಕ್ಟ್ ಎಂಜಿನಿಯರ್ಸ್: 15 ಹುದ್ದೆ, ಸ್ಟೈಫಂಡ್: ರೂ 43,550, 2) ಪ್ರಾಜೆಕ್ಟ್ ಸೂಪರ್‌ವೈಸರ್: 23 ಹುದ್ದೆ, ಸ್ಟೈಫಂಡ್: ರೂ 21,690, ವಯೋಮಿತಿ: 33 ವರ್ಷ ಅರ್ಜಿ ಶುಲ್ಕ: ರೂ 200 * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನಾಂಕ: 28-12-2013 ವಿಳಾಸ: ಡೆಪ್ಯುಟಿ ಜನರಲ್‌ಮ್ಯಾನೇಜರ್ (ಎಚ್.ಆರ್), ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಎಲೆಕ್ಟ್ರಾನಿಕ್ಸ್ ಡಿವಿಷನ್, ಪಿ.ಬಿ.ನಂ: 2606, ಮೈಸೂರು ರಸ್ತೆ, ಬೆಂಗಳೂರು- 560 026 ಹೆಚ್ಚಿನ ಮಾಹಿತಿಗೆ ://../ ಬಿಎಚ್‌ಇಎಲ್ (ಭೋಪಾಲ್) ಭಾರತ್‌ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ (ಬಿಎಚ್ಇಎಲ್) 682 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-12-2013. ಹುದ್ದೆ ಹೆಸರು: ಟ್ರೇಡ್ ಅಪ್ರೆಂಟಿಸ್‌ ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಐಟಿಐ ಪದವಿ ವಯೋಮಿತಿ: ಕನಿಷ್ಠ 14 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್ಟ್‌ಮೂಲಕ ಕಳುಹಿಸಲು ಕೊನೆಯ ದಿನಾಂಕ: 30–12–2013 ವಿಳಾಸ: ಪೋಸ್ಟ್‌ ಬಾಕ್ಸ್‌ ಸಂಖ್ಯೆ 35, ಪೋಸ್ಟ್‌ ಆಫೀಸ್‌ ಪಿಪ್ಲಾನಿ, ಬಿಎಚ್‌ಇಎಲ್ ಭೋಪಾಲ್– 462 022 ಹೆಚ್ಚಿನ ಮಾಹಿತಿಗೆ ://... ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಎಸ್.ಬಿ.ಐ. ಸೆಂಟ್ರಲ್ ರೆಕ್ರೂಟ್‌ಮೆಂಟ್ ಅಂಡ್ ಪ್ರಮೋಷನ್‌ ಡಿಪಾರ್ಟ್‌ಮೆಂಟ್ 46 ಹುದ್ದೆಗಳನ್ನು (ವಿಶೇಷ ನೇಮಕಾತಿ-ಎಸ್‌ಸಿ/ ಎಸ್‌ಟಿ/ ಒಬಿಸಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-1-2014. ಹುದ್ದೆ ಹೆಸರು: ಮ್ಯಾನೇಜ್‌ಮೆಂಟ್ ಎಕ್ಸಿಕ್ಯುಟಿವ್‌ ವೇತನ ಶ್ರೇಣಿ: ರೂ 19,400- 28,100 ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ/ ಡಿಪ್ಲೊಮಾ (ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್, ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಅಥವಾ ಎಂ.ಕಾಂ., ಎಂ.ಎ., ಎಂ.ಎಸ್ಸಿ. ಪದವಿ) ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ. ಅರ್ಜಿ ಶುಲ್ಕ: ರೂ 500 (ಒಬಿಸಿ), ರೂ 100 (ಎಸ್‌ಸಿ/ ಎಸ್‌ಟಿ) ಆಯ್ಕೆ ವಿಧಾನ: ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನ (23-2-2014) ಹೆಚ್ಚಿನ ಮಾಹಿತಿಗೆ ... ಕರ್ನಾಟಕ ಪೋಸ್ಟಲ್ ವೃತ್ತ 258 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-1-2014. ಹುದ್ದೆ ಹೆಸರು: 1) ಮೇಲ್ ಗಾರ್ಡ್: 10 ಹುದ್ದೆ, 2) ಪೋಸ್ಟ್‌ ಮ್ಯಾನ್: 248 ಹುದ್ದೆ. ವೇತನ ಶ್ರೇಣಿ: ರೂ 5,200- 20,200 ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಪರೀಕ್ಷೆ ಶುಲ್ಕ: ರೂ 200 ಆಯ್ಕೆ ವಿಧಾನ: ಆ್ಯಪ್ಟಿಟ್ಯೂಡ್ ಟೆಸ್ಟ್ ವಿಳಾಸ ಹಾಗೂ ಹೆಚ್ಚಿನ ಮಾಹಿತಿಗೆ ://... ನಾರ್ಥ್ ಸೆಂಟ್ರಲ್ ರೈಲ್ವೆ 388 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27–12-2013. ಹುದ್ದೆ ಹೆಸರು: ಆ್ಯಕ್ಟ್ ಅಪ್ರೆಂಟಿಸ್‌ ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ ವಯೋಮಿತಿ: ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿಳಾಸ: ದಿ ಚೀಫ್ ವರ್ಕ್‌ಶಾಪ್ ಮ್ಯಾನೇಜರ್, (ಪರ್ಸನಲ್‌ ಬ್ರಾಂಚ್/ ರೆಕ್ರೂಟ್‌ಮೆಂಟ್ ಸೆಕ್ಷನ್, ಜಾನ್ಸಿ (ಉತ್ತರ ಪ್ರದೇಶ)-28400 ಹೆಚ್ಚಿನ ಮಾಹಿತಿಗೆ ://.... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.