ಕತ್ತರಿಸದ ಬೆರಳಿನಿಂದ ರಕ್ತ! ಬೇಕಾಗುವ ಸಾಮಗ್ರಗಳು: ಬೀಕರ್, ಫೆರಿಕ್ ಕ್ಲೊರೈಡ್ ಹರಳು, ಪೊಟ್ಯಾಸಿಯಂ ಸಲ್ಫೋಸೈನಾಯಿಡ್ ದ್ರಾವಣ. ವಿಧಾನ: ಒಂದು ಗ್ಲಾಸಿನಲ್ಲಿ ಮುಕ್ಕಾಲು ಭಾಗ ಪೊಟ್ಯಾಸಿಯಂ ಸಲ್ಫೋಸೈನಾಯಿಡ್ ದ್ರಾವಣವನ್ನು ತೆಗೆದುಕೊಳ್ಳಿ. ನಿಮ್ಮ ಕೈಯ ತೋರು ಬೆರಳಿನ ಉಗುರಿನ ಕೆಳಗೆ ಫೆರಿಕ್ ಕ್ಲೊರೈಡ್‌ನ ಚಿಕ್ಕ ಹರಳನ್ನು ಇಟ್ಟುಕೊಳ್ಳಿ. ಪ್ರಶ್ನೆ: ಫೆರಿಕ್ ಕ್ಲೋರೈಡ್ ಹರಳಿರುವ ಬೆರಳನ್ನು ಸಾವಕಾಶವಾಗಿ ಗ್ಲಾಸಿನಲ್ಲಿ ಅದ್ದಿ ಮೇಲೆತ್ತಿ. ಏನಾಗುತ್ತದೆ? ಯಾಕೆ? ಉತ್ತರ: ನಿಮ್ಮ ಬೆರಳಿನಿಂದ ರಕ್ತ ಬರುತ್ತದೆ. ಅಲ್ಲ ಅಲ್ಲ ರಕ್ತದ ಬಣ್ಣ ಬರುತ್ತದೆ. ಫೆರಿಕ್ ಕ್ಲೊರೈಡ್, ಪೊಟ್ಯಾಸಿಯಂ ಸಲ್ಫೋಸೈನಾಯಿಡ್‌ಜೊತೆ ಸಂಯೋಗವಾಗಿ ಕೆಂಪು ಬಣ್ಣದ ಫೆರಿಕ್ ಸಲ್ಫೋಸೈನಾಯಿಡ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. FeCl3 + → 3KCl + ()3 ಫೆರಿಕ್ ಕ್ಲೊರೈಡ್ ಪೊಟ್ಯಾಸಿಯಂ ಪೊಟ್ಯಾಸಿಯಂ ಕ್ಲೊರೈಡ್ ಫೆರಿಕ್ ಸಲ್ಫೋಸೈನಾಯಿಡ್ ಸಲ್ಫೋಸೈನಾಯಿಡ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.