ಅಂಗೈನಲ್ಲೊಂದು ರಂಧ್ರ ಪ್ರಶ್ನೆ: ಎಡಗಣ್ಣಿನಿಂದ ಸುರುಳಿಯಲ್ಲಿ ಹಾಗೂ ಬಲಗಣ್ಣಿನಿಂದ ಅಂಗ್ಯೆಯನ್ನು ಒಮ್ಮೆಲೇ ನೋಡಿ. ಏನು ಕಾಣುತ್ತದೆ? ಯಾಕೆ? ಉತ್ತರ: ನಿಮ್ಮ ಬಲಗೈ ಅಂಗೈಯಲ್ಲಿ ರಂಧ್ರ ಕಾಣುತ್ತದೆ. ಯಾಕೆಂದರೆ ನಿಮ್ಮ ಒಂದು ಕಣ್ಣು ಸುರುಳಿಯಲ್ಲಿ, ಇನ್ನೊಂದು ಕಣ್ಣು ಅಂಗೈಯನ್ನು ನೋಡುವುದರಿಂದ ನಿಮ್ಮ ಮೆದಳು ಎರಡು ಚಿತ್ರಗಳನ್ನು ನೋಡುವಂತೆ ಮಾಡುತ್ತದೆ. ಹೀಗಾಗಿ ಅಂಗ್ಯೆಯಲ್ಲಿ ರಂಧ್ರ ಕಾಣುತ್ತದೆ. (ಕಣ್ಣು ಬದಲಿಸಿ ಈ ಪ್ರಯೋಗ ಮಾಡಬಹುದು). ಸಾಮಗ್ರಿ: ಎ೪ ಅಳತೆಯ ಕಾಗದ. ವಿಧಾನ: ೧. ಎ೪ ಅಳತೆಯ ಕಾಗದವನ್ನು ತೆಗೆದುಕೊಳ್ಳಿ. ೨. ಅದನ್ನು ಸಿಲಿಂಡರಾಕಾರದಂತೆ ಸುತ್ತಿ ನಿಮ್ಮ ಬಲ/ಎಡಗಣ್ಣಿನ ಎದುರಿಗೆ ಹಾಗೂ ಕಣ್ಣಿಗೆ ಹತ್ತಿ, ಚಿತ್ರದಲ್ಲಿ ತೋರಿಸಿದಂತೆ ಹಿಡಿದುಕೊಳ್ಳಿ. ೩. ನಿಮ್ಮ ಎಡ/ಬಲಗೈಯನ್ನು ಎಡ/ಬಲ ಕಣ್ಣಿನ ಎದುರಿಗೆ, ಕಾಗದದ ಸುರುಳಿಗೆ ಹತ್ತಿ ಸುಮಾರು ೧೦ ಸೆ.ಮೀ. ದೂರದಲ್ಲಿ ಹಿಡಿದುಕೊಳ್ಳಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.