ಮಾಡಿ ನಲಿ ಸಾಮಗ್ರಿ: ಕಾರ್ನಿಂಗ್ ಬೀಕರು, ನೀರು, ಉಪ್ಪು, ಗಟ್ಟಿ ದಾರ, ಸ್ಪಿರಿಟ್ ಲ್ಯಾಂಪ್, ಬೆಂಕಿ ಪೆಟ್ಟಿಗೆ, ಚಿಕ್ಕ ಕಲ್ಲು. ವಿಧಾನ : ೧) ಒಂದು ಕಾರ್ನಿಂಗ್ ಬೀಕರಿನಲ್ಲಿ ಅರ್ಧದಷ್ಟು ನೀರನ್ನು ತೆಗೆದುಕೊಂಡು ಕುದಿಯಲು ಬಿಡಿ. ೨) ನೀರಿಗೆ ಪುಡಿ ಉಪ್ಪನ್ನು ಹಾಕುತ್ತಾ ಕಲಕಿ. ೩) ದ್ರಾವಣ ಸಂತ್ರಪ್ತವಾಗಲಿ. ೪) ಸಂತ್ರಪ್ತ ದ್ರಾವಣದಲ್ಲಿ ಒಂದು ಮೀಟರ್ ಉದ್ದ ಹಾಗೂ ಗಟ್ಟಿ ದಾರವನ್ನು ಎರಡು ದಿವಸ ನೆನೆಸಿ ಒಣಗಿಸಿ. ೫) ಚಿತ್ರದಲ್ಲಿ ತೋರಿಸಿದಂತೆ ಒಂದು ಚಿಕ್ಕ ಕಲ್ಲನ್ನು ದಾರದ ಒಂದು ತುದಿಗೆ ಬಿಗಿಯಾಗಿ ಕಟ್ಟಿ. ೬) ದಾರದ ಇನ್ನೊಂದು ತುದಿಯಿಂದ ಆಧಾರಕ್ಕೆ ಕಟ್ಟಿ, ದಾರಕ್ಕೆ ಬೆಂಕಿ ಹಚ್ಚಿ. ಪ್ರಶ್ನೆ: ದಾರ ಸುಟ್ಟು ಬೂದಿ ಆಯಿತೇ? ಯಾಕೆ? ಉತ್ತರ: ದಾರ ಉರಿದು ಬೂದಿಯಂತೆ ಕಾಣುತ್ತದೆ. ಆದರೂ ದಾರಕ್ಕೆ ಕಟ್ಟಿದ ಕಲ್ಲು ಕೆಳಗೆ ಬೀಳುವುದಿಲ್ಲ. ಉಪ್ಪಿನ ಹರಳು ಉರಿದಂತೆ ಗೋಚರಿಸುತ್ತವೆ. ಅವು ದಾರವನ್ನು ಪೂರ್ತಿಯಾಗಿ ಉರಿಯಲು ಬಿಡುವುದಿಲ್ಲ.ಹೀಗಾಗಿ ದಾರ ಸುರಕ್ಷಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.