ಅರೆ ವೈದ್ಯಕೀಯ ವೃತ್ತಿ ಶಿಕ್ಷಣ ಅರೆ ವೈದ್ಯಕೀಯ ಶಿಕ್ಷಣಕ್ಕೆ ಇಂದು ನಗರ ಪ್ರದೇಶಗಳ ಜೊತೆಗೆ ಸಣ್ಣ ಪಟ್ಟಣ, ಹಳ್ಳಿಗಳಲ್ಲಿಯೂ ಸಣ್ಣ ಆಸ್ಪತ್ರೆ, ನಸಿ೯ಂಗ್ ಹೋಮ್ಸ್ ಕಾರ್ಯನಿರ್ವಹಿಸುತ್ತದೆ. ಭಾರತ ದೇಶದ ೮0% ಜನ ಸಂಖ್ಯೆ ಸಣ್ಣ ಊರು ಹಾಗೂ ಹಳ್ಳಿಗಳಲ್ಲಿ ಇರುವುದರಿಂದ ಆರೋಗ್ಯ ಘಟಕದ ಸ್ಥಾಪನೆ ಅಗತ್ಯವಾಗಿದೆ. ವೈದ್ಯರಲ್ಲದೆ ಅವರ ಸಹಾಯಕ ಸಿಬ್ಬಂದಿ ನರ್ಸ್‌, ಆರೆವೈದ್ಯಕೀಯ ಸಿಬ್ಬಂದಿ () ಆಯ ಇವರುಗಳು ಈ ಘಟಕಗಳ ಕಾರ್ಯನಿರ್ವಹಣೆಯಲ್ಲಿ ಅತಿಮುಖ್ಯಪಾತ್ರ ವಹಿಸುತ್ತಾರೆ. ರೋಗಿಯ ಚಿಕೆತ್ಸೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿಯೂ ಮುಖ್ಯ. ಇಂದು ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಒಂದು ತಂಡದಂತೆ ಕೆಲಸ ನಿರ್ವಹಿಸುತ್ತದೆ. ಅರೆವೈದ್ಯಕೀಯ ವೃತ್ತಿ ಶಿಕ್ಷಣ ಪಡೆದು ಈ ವೈದ್ಯಕೀಯ ತಂಡದ ಒಂದು ಭಾಗವಾಗಿ ಕೆಲಸ ನಿರ್ವಹಿಸಬಹುದು. ವೈದ್ಯರು ಪರೀಕ್ಷೆಯಿಂದ ರೋಗಪತ್ತೆ ಮಾಡುತ್ತಾರೆ. ಆದರೆ ನಿಖರವಾಗಿ ಇದೇ ಎಂದು ನೂರಕ್ಕೆ ನೂರು ಭಾಗ ಸಾಬೀತಾಗುವುದು ಪ್ರಯೋಗಾಲಯ ಪರೀಕ್ಷೆಗಳು - , - , ಮತ್ತೆ ಇತರೆ ಪರೀಕ್ಷೆಗಳಿಂದ. ಈ ವಿಭಾಗಗಳಲ್ಲಿ ನಮಗೆ ತರಬೇತಿ ಪಡೆದ ಅರೆವೈದ್ಯಕೀಯ ಸಿಬ್ಬಂದಿ ಅತ್ಯಗತ್ಯವಾಗಿದೆ. ಇದರ ಮಹತ್ವವನ್ನರಿತು ಕರ್ನಾಟಕ ಸರ್ಕಾರ 1997ರಲ್ಲಿ ಅರೆವೈದ್ಯಕೀಯ ಮಂಡಳಿ ಪ್ಯಾರಾಮೆಡಿಕಲ್ ಮಂಡಳಿಯನ್ನು ಸ್ಥಾಪಿಸಿದೆ. ನಮ್ಮ ರಾಜ್ಯದಲ್ಲಿ ನಡೆಸುತ್ತಿರುವ ವಿವಿಧ ವಿಭಾಗಗಳ ಕೋರ್ಸ್‌ಗಳು: ವೈದ್ಯಕೀಯ ಪ್ರಯೋಗಾಲಯ, ಕ್ಷ - ಕಿರಣ ವಿಭಾಗ, ಆಪರೇಷನ್ ಥಿಯೇಟರ್, ಇಸಿಜಿ ತಂತ್ರಜ್ಞ, ಡಯಾಲಿಸಿಸ್ ಹೀಗೆ ಹಲವು ವಿಭಾಗಗಳಿವೆ. ಇವೆಲ್ಲ ವಿಭಾಗಗಳೂ ಆಯಾ ವಿಭಾಗದ ಮುಖ್ಯಸ್ಥರ ನಿರ್ದೇಶನ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ಈ ಎಲ್ಲ ಶಿಕ್ಷಣ ಪದ್ಧತಿಗಳ ಪಠ್ಯಕ್ರಮ ಶಿಕ್ಷಣದ ರೂಪುರೇಶೆ, ಪರೀಕ್ಷೆಗಳು. ಮೂಲ ವಿದರ್ಹತೆ, ಇರಬೇಕಾದ ಸೌಲಭ್ಯಗಳು ತರಬೇತಿ ಬಗ್ಗೆ ಅರೆ ವೈದ್ಯಕೀಯ ಮಂಡಳಿ ನಿಖರವಾದ ನಿಯಮಗಳನ್ನು ರೂಪಿಸಿದೆ. ಈ ಎಲ್ಲ ಕೋರ್ಸ್‌ಗಳಲ್ಲಿ ಪ್ರಾಯೋಗಿಕ ಕಲಿಕೆಗೆ ಪೂರಕ ಪಠ್ಯಕ್ರಮ ರೂಪಿಸಲಾಗಿದೆ. ಅರೆವೈದ್ಯಕೀಯ ಕಾಲೇಜುಗಳನ್ನು ಆಯ್ಕೆಮಾಡಿಕೊಳ್ಳುವಾಗ ಅದು ಅರೆ ವೈದ್ಯಾಕೀಯಮಂಡಳಿಯ ಮಾನ್ಯತೆ ಪಡೆದಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. * ವಿದ್ಯಾರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ವಯೋವಿತಿ 18-ರಿಂದ35 ವರ್ಷಗಳು. ಇವರು 3ವರ್ಷದ ಶಿಕ್ಷಣ ಪಡೆಯುತ್ತಾರೆ. ಮೊದಲ ವರ್ಷ. ಇಂಗ್ಲೀಷ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ಕಲಿಯಬೇಕಾಗುತ್ತದೆ. 2ನೇ ವರ್ಷ ಹಾಗೂ 3ನೇ ವರ್ಷ ವೈದ್ಯಕೀಯಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ಕಲಿಕೆ ಹಾಗೂ ತರಬೇತಿ ನಡೆಯುತ್ತದೆ. * ಪಿಯುಸಿ ಅಥವಾ 12th ತರಗತಿ ವಿಜ್ಞಾನ ವಿಷಯ ತೆಗೆದುಕೊಂಡು ಉತ್ತೀರ್ಣರಾದ ಆದ ವಿದ್ಯಾರ್ಥಿಗಳು 2ನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಬಹುದು ವಯೋಮಿತಿ:18-35. * ಕಲಾ ಮತ್ತು ವಾಣಿಜ್ಯ ಮಾಡಿದ ವಿದ್ಯಾರ್ಥಿಗಳಿಗೆ ಈ ವಿಭಾಗದಲ್ಲಿ ಆಸಕ್ತಿ ಇದ್ದರೆ 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಮೊದಲನೇ ವರ್ಷದ ಪ್ರವೇಶ ಪಡೆಯಬಹುದು. ಇವರು 3 ವರ್ಷ ಓದಬೇಕಾಗುತ್ತದೆ. * ಕಲಾ ಮತ್ತು ವಾಣಿಜ್ಯದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ದಾಖಲೆಗಳ ತಂತ್ರಜ್ಞಾನ () ವಿಭಾಗಕ್ಕೆ ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಬಹುದು. ಇವರೆಲ್ಲರಿಗೂ ಆಯಾ ವಿಭಾಗದ ಡಿಪ್ಲೊಮಾ ಪ್ರಮಾಣಪತ್ರ ಸಿಗುತ್ತದೆ. ".." ನಲ್ಲಿ ಎಲ್ಲ ಮಾಹಿತಿ ಪಡೆಯಬಹುದು. * ಆಡಳಿತ ಮಂಡಲಿಯ ಸೀಟು:ಇದನ್ನು ಆಯಾ ಕಾಲೇಜುಗಳಿಂದ ನೇರವಾಗಿ ಪಡೆಯಬಹುದು. * ಖಾಸಗಿ ಕಾಲೇಜುಗಳಲ್ಲಿ ಸಿಇಟಿ ಕೌನ್ಸೆಲಿಂಗ್ ಮೂಲಕ ಅರೆವೈದ್ಯಕೀಯ ಮಂಡಳಿಯ ಆಯ್ಕೆ ಪ್ರಕ್ರಿಯೆಯಿಂದ ಪಡೆಯಬಹುದು. ಇಲ್ಲಿ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ಸರ್ಕಾರಿ ನಿಯಮಗಳಂತೆ ಪ್ರವೇಶ ನಿರ್ಧಾರವಾಗುತ್ತದೆ. ದೇಶ, ವಿದೇಶಗಳಲ್ಲಿ ಅರೆವೈದ್ಯಕೀಯ ಮಂಡಳಿಯ ಈ ಡಿಪ್ಲೊಮಾ ಕೋರ್ಸುಗಳಿಗೆ ಮಾನ್ಯತೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.