ದಾರ ಕಟ್ಟದೇ ಮಂಜು ಮೇಲೆತ್ತು ವಿಧಾನ: 1. ಮಂಜುಗಡ್ಡೆಯ ದೊಡ್ಡ ತುಂಡೊಂದನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿಡಿ. 2. ಚಿತ್ರದಲ್ಲಿ ತೋರಿಸಿದಂತೆ ಮಂಜುಗಡ್ಡೆಯ ಮಧ್ಯದಲ್ಲಿ ದಾರವನ್ನಿಡಿ. 3. ಮಂಜುಗಡ್ಡೆಯ ಮೇಲಿರುವ ದಾರದ ಮೇಲೆ ಸ್ವಲ್ಪ ಉಪ್ಪು ಹಾಕಿ. 4. ಸ್ವಲ್ಪ ಸಮಯದ ನಂತರ ಸಾವಕಾಶವಾಗಿ ಒಂದು ದಾರದ ತುದಿಯನ್ನು ಹಿಡಿದು ಮೇಲೆತ್ತಿ. ಪ್ರಶ್ನೆ: 1. ಉಪ್ಪು ಹಾಕದೆ, ಕೇವಲ ದಾರವನ್ನು ಮಂಜು ಗಡ್ಡೆಯ ಮೇಲಿಟ್ಟು ದಾರವನ್ನು ಮೇಲೆತ್ತಿದಾಗ ಏನಾಗು ತ್ತದೆ? 2. ದಾರದ ಗುಂಟ ಉಪ್ಪನ್ನು ಹಾಕಿ, ಅನಂತರ ದಾರವನ್ನೆತ್ತಿದಾಗ ಏನಾಗುತ್ತದೆ, ಏಕೆ? 3. ಯಾವ ತಾಪಮಾನದಲ್ಲಿ ಮಂಜುಗಡ್ಡೆ ಕರಗುತ್ತದೆ ? ಉತ್ತರ: 1. ಮಂಜುಗಡ್ಡೆ ದಾರಕ್ಕೆ ಅಂಟಿಕೊಳ್ಳುವುದಿಲ್ಲ. 2. ಉಪ್ಪು ನೀರಿನ ದ್ರವದ ಬಿಂದು ( ) ಹಾಗೂ ಘನೀಕರಣ ಬಿಂದು ( ) ಶುದ್ಧ ನೀರಿಗಿಂತ ಕಡಿಮೆ. ಆದ್ದರಿಂದ ದಾರದ ಮೇಲೆ ಉಪ್ಪನ್ನು ಹಾಕಿದಾಗ ಅದರ ಪಕ್ಕದಲ್ಲಿಯ ಮಂಜುಗಡ್ಡೆ ಕರಗಿ ನೀರಾಗುತ್ತದೆ ಹಾಗೂ ದಾರ ನೀರಿನಲ್ಲಿ ಮುಳುಗುತ್ತದೆ. ಸ್ವಲ್ಪ ಸಮಯದಲ್ಲಿಯೇ ಕರಗಿದ ಮಂಜುಗಡ್ಡೆ ಗಟ್ಟಿಯಾಗುತ್ತದೆ. ದಾರ ಮಂಜುಗಡ್ಡೆಗೆ ಗಟ್ಟಿಯಾಗಿ ಅಂಟಿಕೊಳ್ಳೊತ್ತದೆ. ದಾರದ ಒಂದು ತುದಿಯನ್ನು ಹಿಡಿದು ಮೇಲೆತ್ತಿದಾಗ ಮಂಜುಗಡ್ಡೆಯೂ ಮೇಲೇಳುತ್ತದೆ. 3. ೦ (ಸೊನ್ನೆ ) ಡಿಗ್ರಿ ಸೆಲ್ಸಿಯಸ್‌ನಲ್ಲಿ ಮಂಜುಗಡ್ಡೆ ಕರಗುತ್ತದೆ. ತಂಪು ದೇಶಗಳಲ್ಲಿ ಛಳಿಗಾಲದಲ್ಲಿ ರಸ್ತೆಗಳು ಮಂಜುಗಡ್ಡೆಯಿಂದ ಆವೃತವಾಗಿದ್ದರೆ, ವಾಹನ ನಡೆಸುವುದು ಕಠಿಣ. ಮಂಜುಗಡ್ಡೆಯ ಮೇಲೆ ವಾಹನದ ಭಾರ ಬೀಳುವುದರಿಂದ ನೀರಿನ ಘನೀಕರಣ ಬಿಂದು ತಗ್ಗಿ ಟೈರ್‌ಗಳ ಕೆಳಗಿನ ಮಂಜುಗಡ್ಡೆ ಕರಗಿ ನೀರಾಗುತ್ತದೆ. ಆಗ ವಾಹನಗಳು ಜಾರಿ ಬೀಳುತ್ತವೆ. ಮಂಜುಗಡ್ಡೆಯ ಮೇಲೆ ಉಪ್ಪು ಸುರುವುದರಿಂದ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗುತ್ತದೆ. ಆಗ ವಾಹನಗಳು ಮಂಜುಗಡ್ಡೆಯ ಮೇಲೆ ಚಲಿಸಿದರೂ ಕೂಡ ಮಂಜುಗಡ್ಡೆ ಮತ್ತೆ ಕರಗುವುದಿಲ್ಲ. ಹೀಗಾಗಿ ವಾಹಗಳು ಸರಳವಾಗಿ ಚಲಿಸುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.