ಸೈಫನ್ ಮಾದರಿ ವಿಧಾನ: ೧) ಚಿತ್ರದಲ್ಲಿ ತೋರಿಸಿದಂತೆ ಎರಡು ಗ್ಲಾಸುಗಳನ್ನಿಡಿ. ೨) ಮೇಲಿನ ಗ್ಲಾಸಿನಲ್ಲಿ ಮುಕ್ಕಾಲು ಭಾಗ ನೀರು ತುಂಬಿ. ೩) ಕೆಳಗಿನ ಗ್ಲಾಸು ಖಾಲಿ ಇರಲಿ. ೪) ಉದ್ದವಾದ ಒಂದು ಅರಳೆಯ ಬತ್ತಿಯನ್ನು ಒದ್ದೆ ಮಾಡಿ ಚಿತ್ರದಲ್ಲಿ ತೋರಿಸಿದಂತೆ ಇಡಿ. ೫-೬ ಗಂಟೆಗಳ ನಂತರ ನೀರನ್ನು ವೀಕ್ಷಿಸಿ. ಉತ್ತರ: ಮೇಲಿನ ಗ್ಲಾಸಿನಿಂದ ನೀರು ಅರಳೆಯ ಬತ್ತಿಯ ಮುಖಾಂತರ ಕೆಳಗಿನ ಗ್ಲಾಸಿನಲ್ಲಿ ಶೇಖರಣೆಯಾಗುತ್ತದೆ. ಯಾಕೆಂದರೆ ಅರಳೆಯ ಎಳೆಗಳು ಲೋಮನಾಳಗಳಂತೆ ವರ್ತಿಸುತ್ತವೆ. ಲೋಮನಾಳ ಕ್ರಿಯೆಯಿಂದ ನೀರು ಅದರ ಮಟ್ಟದಿಂದ ಮೇಲೇರುತ್ತದೆ. ‘ಅ’ ದಿಂದ ನೀರು ‘ಬ’ ದಾಟಿದರೆ ಗುರುತ್ವಾಕರ್ಷಣೆಯಿಂದ ‘ಕ’ ದ ವರೆಗೆ ಬಂದು ಕೆಳಗಿನ ಗ್ಲಾಸಿನಲ್ಲಿ ಸಂಗ್ರಹವಾಗುತ್ತದೆ. ಪ್ರಶ್ನೆ: ಈಗ ನೀರು ಎಲ್ಲಿದೆ ? ಯಾಕೆ ? ಉತ್ತರ: ಮೇಲಿನ ಗ್ಲಾಸಿನಿಂದ ನೀರು ಅರಳೆಯ ಬತ್ತಿಯ ಮುಖಾಂತರ ಕೆಳಗಿನ ಗ್ಲಾಸಿನಲ್ಲಿ ಶೇಖರಣೆಯಾಗುತ್ತದೆ. ಯಾಕೆಂದರೆ ಅರಳೆಯ ಎಳೆಗಳು ಲೋಮನಾಳಗಳಂತೆ ವರ್ತಿಸುತ್ತವೆ. ಲೋಮನಾಳ ಕ್ರಿಯೆಯಿಂದ ನೀರು ಅದರ ಮಟ್ಟದಿಂದ ಮೇಲೇರುತ್ತದೆ. ‘ಅ’ ದಿಂದ ನೀರು ‘ಬ’ ದಾಟಿದರೆ ಗುರುತ್ವಾಕರ್ಷಣೆಯಿಂದ ‘ಕ’ ದ ವರೆಗೆ ಬಂದು ಕೆಳಗಿನ ಗ್ಲಾಸಿನಲ್ಲಿ ಸಂಗ್ರಹವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.