ಕಲಿಕಾ ದೌರ್ಬಲ್ಯ ಗುರುತಿಸಿ, ಬೆಂಬಲಿಸಿ... ಕೆಲವು ಮಕ್ಕಳಿಗೆ ಶುದ್ಧ ದಡ್ಡ. ಏನೇನೂ ಬರೋದಿಲ್ಲ. ಎಷ್ಟು ಹೇಳಿದರೂ ಅಷ್ಟೆ! ಹೀಗೆ ಹೀಗಳೆಯುತ್ತಲೇ ಇರುತ್ತೇವೆ. ಆದರೆ ಎಲ್ಲ ಪ್ರಯತ್ನಗಳೂ ವಿಫಲವಾದಾಗ, ಒಂದೋ ಕಲಿಸುವ ವಿಧಾನ ತಪ್ಪಿರಬೇಕು. ಇಲ್ಲವೇ ಕಲಿಕಾರ್ಥಿಗೆ ಕಲಿಕಾ ದೌರ್ಬಲ್ಯವಿರಬೇಕು. ಇದನ್ನು ಗಮನಿಸಬೇಕಾದವರು ಪಾಲಕರು ಮತ್ತು ಶಿಕ್ಷಕರು. ಉದಾ೧: ರಾಹುಲ್ ಎರಡನೆ ತರಗತಿಯಲ್ಲಿ ಓದುತ್ತಿರುವ ಆಂಗ್ಲಮಾಧ್ಯಮದ ವಿದ್ಯಾರ್ಥಿ. ಮಾತೃಭಾಷೆ ತಮಿಳು. ಪ್ರತಿ ಪಾಲಕರ ಸಭೆಯಲ್ಲಿ ಪೋಷಕರಿಗೆ ರಾಹುಲ್‌ನ ಫಲಿತಾಂಶ ಕೇಳಿದಾಗ ಸಮಾಧಾನಕರ ಬೆಳವಣಿಗೆ ಕಾಣುತ್ತಲೇ ಇರಲಿಲ್ಲ. ರಾಹುಲ್ ಉತ್ತರವನ್ನು ಮೌಖಿಕವಾಗಿ ಹೇಳುತ್ತಾನೆ. ಆದರೆ ಬರೆಯುವ ಉತ್ತರ ಪ್ರಶ್ನೆಗೆ ಸಮಂಜಸವಿರುವುದಿಲ್ಲ ಎನ್ನುವುದು ಶಿಕ್ಷಕರ ಅಭಿಪ್ರಾಯ. ಅದಕ್ಕೆ ಅವರು ಉತ್ತರ ಪತ್ರಿಕೆಯನ್ನೂ ತೋರಿಸುತ್ತಾರೆ. ಪ್ರ; ? ಉ; ಬಾಯಿಂದ ಸರಿಯಾದ ಉತ್ತರ ಹೇಳುವ ವಿದ್ಯಾರ್ಥಿಗೆ ಬರೆಯಲು ಮಾತ್ರ ಕಷ್ಟ. ಆದರೆ ಪರೀಕ್ಷೆಯಲ್ಲಿ ಅಂಕಗಳನ್ನು ನೀಡುವುದೇ ಬರವಣಿಗೆಗೆ. ಇದೇ ರೀತಿಯಲ್ಲಿ ಮುಂದುವರಿದರೆ, ಮುಂದಿನ ತರಗತಿಗಳಲ್ಲಿ ನಪಾಸು ಆಗುವುದು ಖಂಡಿತ ಎಂಬಂಥ ಮಾತುಗಳನ್ನೇ ಹೇಳುತ್ತಾರೆ. ಹೇಳುವ ಚಾತುರ್ಯ, ಬರೆಯುವುದರಲ್ಲಿ ಇಲ್ಲ. ಇದಕ್ಕೇನು ಪರಿಹಾರ? ಸ್ನೇಹ ನಾಲ್ಕನೆ ತರಗತಿ ವಿಧ್ಯಾರ್ಥಿನಿ. ಇಂಗ್ಲಿಷ್ ಪುಸ್ತಕದ ಎರಡನೆ ಅಧ್ಯಾಯ ಓದಲು ತಿಳಿಸಲಾಗುತ್ತದೆ. ಪಾಠ ಹೀಗಿದೆ: . , ’ . ಆದರೆ ಸ್ನೇಹ ಒಂದೆರಡು ಶಬ್ದಗಳನ್ನು ಓದುವುದೇ ಇಲ್ಲ. ಮೊದಲ ವಾಕ್ಯದ ಮೂರು ಶಬ್ದಗಳನ್ನು ಗುರುತಿಸುವಲ್ಲಿಯೇ ಸಾಕುಬೇಕಾಗುವಂತೆ ನಿಂತು ಬಿಡುತ್ತಾಳೆ. ... ಮುಂದೆ ಓದಲಾಗದು. ಶಿಕ್ಷಕಿ: ಸ್ನೇಹ ನಿನಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ನಾಲ್ಕನೆ ತರಗತಿ ಆದ್ರೂ ಓದುವುದು ಯು.ಕೆ.ಜಿ ಮಕ್ಕಳಂತೆ. ಇನ್ನು ಸುಧಾರಣೆ ಯಾವಾಗ ಆಗುವುದೋ? ಉದಾ ೩: ಅಪ್ಪ– ಅರುಣ್ (೭ನೆ ತರಗತಿ ವಿದ್ಯಾರ್ಥಿ)ಎಲ್ಲಿ ನಿನ್ನ ಗಣಿತದ ನೋಟ್ ಬುಕ್ ಮತ್ತು ಗಣಿತದ ಪುಸ್ತಕ ಕೊಡು. ನೋಟ್ ಬುಕ್ ನೋಡಿದಾಗ ಅಂತ ಟೀಚರ್ ಸಹಿ ಹಾಕಿದ್ದರು. ಮಗನಿಗೆ ಕೇಳಿದರೆ, ‘ಅಪ್ಪ ನನಗೆ ಗಣಿತ ಅರ್ಥ ಆಗಲ್ಲ. ಇದು ತುಂಬಾ ಕಷ್ಟ’ ಎಂದ. ಅಪ್ಪ ದಿನಾ ಒಂದು ಗಂಟೆ ಗಣಿತದ ಪಾಠ ಮಾಡಲು ಆರಂಭಿಸಿದರು. ಆದರೆ ನೆನ್ನೆ ಕಲಿತಿದ್ದು ನೆನ್ನೆಗೆ ಮಾತ್ರ ನೆನಪು. ಮರುದಿನ ಅದು ಮತ್ತೆ ಹೊಸ ಪಾಠವೇ. ಸಹನೆ ಕಳೆದುಕೊಂಡ ಅಪ್ಪ ‘ಛಡಿ ಛಂ ಛಂ’ ಸೂತ್ರಕ್ಕಿಳಿದರು. ಆದರೆ ಗಣಿತದ ಕಲಿಕೆ ಮಾತ್ರ ಶೂನ್ಯ. ಹೌದು ಏನೀ ಮಕ್ಕಳ ಸಮಸ್ಯೆ? ಇದಕ್ಕೆ ಏನು ಪರಿಹಾರ? ಪ್ರತಿ ತರಗತಿಯಲ್ಲಿ 30ರಿಂದ 40 ಮಕ್ಕಳಿದ್ದರೆ ಶೇ 10ರಷ್ಟು ಮಕ್ಕಳು ಇಂಥ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕನಿಷ್ಠ 3–4 ಮಕ್ಕಳಲ್ಲಿ ಕಲಿಕಾ ದೌರ್ಬಲ್ಯ ಕಂಡು ಬರುತ್ತದೆ. ಸರಿಯಾದ ಮಾರ್ಗದರ್ಶನ ಸಿಗದೆ ಮಕ್ಕಳು ಓದಿನಲ್ಲಿ ನಿರಾಸಕ್ತಿ ಬೆಳೆಸಿಕೊಳ್ಳುವರು. ಈ ಸಮಸ್ಯೆಗೆ ‘ಕಲಿಕಾ ನ್ಯೂನ್ಯತೆ’ ಎಂದು ಕರೆಯುವರು. ಇದು ನರದೋಷದ ಸಮಸ್ಯೆ. ತಾಯಿಯ ಗರ್ಭಾವಸ್ಥೆ, ಪ್ರಸವದ ನಂತರದ ವಾತಾವರಣ, ಮಗುವಿನ ಬೆಳವಣಿಗೆಯಲ್ಲಿ ಆಗುವ ಯಾವುದೆ ಸಮಸ್ಯೆ, ಸೋಂಕು, ಮುಂದಿನ ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದಲ್ಲಿ ತೊಂದರೆ ಅನುಭವಿಸುವಂತೆ ಆಗುತ್ತದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲಾಗದು. ಇದೊಂದು ನಿರಂತರ ಕಲಿಕಾ ಪ್ರಕ್ರಿಯೆ. ಸರಿಯಾದ ತರಬೇತಿ, ಮಾರ್ಗದರ್ಶನ ಬೆಳವಣಿಗೆಗೆ ಪೂರಕ ಸಾಧನಗಳು. ಒಂದು ಭಾಷೆಯನ್ನು ಅರ್ಥೈಸಿಕೊಳ್ಳುವಲ್ಲಿ, ಮಾತನಾಡುವಲ್ಲಿ, ಬರೆಯುವಲ್ಇ, ಓದುವುದರಲ್ಲಿ ಸಮರ್ಥರಾಗಿರದ ಸ್ಥಿತಿ. ಇದನ್ನು ಇನ್ನೊಂದು ರೀತಿಯಲ್ಲಿ ವಿಸ್ತರಿಸಬಹುದು. ಕೇಳುವ, ಯೋಚಿಸುವ, ಪ್ರತಿಕ್ರಿಯಿಸುವ, ಓದುವ, ಬರೆಯುವ, ಅಥವಾ ಗಣಿತದ ಲೆಕ್ಕಾಚಾರಗಳನ್ನು ಮಾಡಲಾಗದ ಅಸಾಮರ್ಥ್ಯವೇ ಕಲಿಕಾ ನ್ಯೂನ್ಯತೆ ಅಥವಾ ದೌರ್ಬಲ್ಯ. ಬುದ್ಧಿಮಾಂದ್ಯ, ಕುರುಡುತನ, ಕಿವುಡುತನ, ಮಾನಸಿಕ ಅಸ್ವಸ್ಥರನ್ನು ಹೊರತು ಪಡಿಸಿಯೇ ಕಲಿಕಾ ದೌರ್ಬಲ್ಯದ ಬಗ್ಗೆ ಚರ್ಚಿಸಬೇಕಾದುದು ಅನಿವಾರ್ಯ. ಕಲಿಕಾ ದೌರ್ಬಲ್ಯದ ಲಕ್ಷಣಗಳು * ಇಂಗ್ಲಿಷ್ ಭಾಷಾ ಕಲಿಕೆಯಲ್ಲಿ ಮಗುವಿಗಾಗುವ ತೊಂದರೆ * ಲೇಖನ ಚಿಹ್ನೆಗಳ ಬಳಕೆ ಮಾಡುವುದು ಕಷ್ಟವೆನಿಸುತ್ತದೆ. ಐಫನೇಶನ್‌, ಅಫೆಸ್ತೊಫಿಗಳ ಬಳಕೆ ಈ ಮಕ್ಕಳಿಗೆ ಗೊತ್ತಾಗುವುದೇ ಇಲ್ಲ. * ಮೌಖಿಕ ಅಭಿವ್ಯಕ್ತಿ ಕೌಶಲ: ಇಲ್ಲಿ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಗೊಂದಲ ಉಂಟಾಗುತ್ತಿರುತ್ತದೆ. * ಲಿಖಿತ ಅಭಿವ್ಯಕ್ತಿ ಕೌಶಲ: ಪದಗಳ ಬಳಕೆ, ವಾಕ್ಯ ಜೋಡಣೆಯಲ್ಲಿ ಹಿಂದೆ ಮುಂದೆ ಆಗುತ್ತಿರುತ್ತದೆ. * ಕೊಡುವ ಉತ್ತರಗಳು ಅಸಮಂಜಸವಾಗಿರುತ್ತವೆ. * ಬರವಣಿಗೆಯಲ್ಲಿ ಹಿಂದುಮುಂದಾಗಿ ಬರೆಯುವುದು, ಅಕ್ಷರಗಳ ಸ್ಥಾನವನ್ನು ಅದಲು ಬದಲು ಮಾಡುವುದು ಸಾಮಾನ್ಯ ಸಮಸ್ಯೆ. * ಶಬ್ದ ಸಂಗ್ರಹದ ಕೊರತೆ ಇರುತ್ತದೆ. ಗ್ರಹಿಸುವಿಕೆಯ ಪ್ರಮಾಣ ಕಡಿಮೆಯಾಗುವುದರಿಂದ ಸಂಗ್ರಹಣೆ ಮತ್ತು ಪ್ರತಿಫಲನದ ಪ್ರಮಾಣವೂ ಕಡಿಮೆಯಾಗಿರುತ್ತದೆ. * ಗಣಿತದಲ್ಲಿ ಅಂಕಿಗಳನ್ನು ಅದಲು ಬದಲು ಮಾಡುವುದು. ಅಂಕಿ ಸ್ಥಾನಗಳನ್ನು ಹಿಂದೆ ಮುಂದೆ ಮಾಡುವುದು ಸಾಮಾನ್ಯ ಸಮಸ್ಯೆ. ಇದಲ್ಲದೇ <, >,+,-,= ಮುಂತಾದ ಚಿಹ್ನೆಗಳ ಬಳಕೆಯಲ್ಲಿ ಗೊಂದಲ ಇದ್ದೇ ಇರುತ್ತದೆ. ಸುದೀರ್ಘ ಸಮಸ್ಯೆಗಳನ್ನು ಬಿಡಿಸುವಾಗ ತೊಂದರೆ ಕಾಣಿಸುತ್ತದೆ. ಕೂಡು, ಕಳೆ, ಗುಣಕಗಳ ಸಮಸ್ಯೆಯನ್ನು ಇವರು ಬಿಡಿಸಲಾರರು. ಗಣಿತ ಪದಸಂಪತ್ತಿನ ಕೊರತೆಯಿಂದಾಗಿ ಇವರಿಗೆ ಬೀಜ ಗಣಿತದ ಸಮಸ್ಯೆಯೂ ಕಾಡುತ್ತದೆ. ಇಂದಿನ ಶಿಕ್ಷಣ ಪದ್ಧತಿ ಮಕ್ಕಳ ಕೇಂದ್ರಿಕೃತವಾದರೂ ಈ ಸಮಸ್ಯೆಯ ಮಕ್ಕಳಿಗೆ ಶಾಲೆಗಳಲ್ಲಿ ದೊರಕುತ್ತಿರುವ ಪರಿಹಾರ ಬೆರಳೆಣಿಕೆಯಷ್ಟು. ಶಿಕ್ಷಕರ ನಿರ್ಲಕ್ಷ್ಯತನದಿಂದ ಈ ಸಮಸ್ಯೆ ಇರುವ ಮಕ್ಕಳು ನೇಪಥ್ಯದಲ್ಲಿಯೇ ಉಳಿಯುವಂತಾಗುತ್ತದೆ. ಈ ಸಮಸ್ಯೆಯನ್ನು ಕಲಿಕಾ ಸಾಮರ್ಥ್ಯದೊಂದಿಗೆ ಹೋಲಿಸುವುದೇ ಹೆಚ್ಚು. ಹೀಗಾಗಿ ಇದು ಸಮಸ್ಯೆಯಾಗಿಯೇ ಉಳಿದಿದೆ. ಕೆಲವೇ ಖಾಸಗಿ ಶಾಲೆಗಳಲ್ಲಿ ಮಾತ್ರ ಕಲಿಕಾ ದೌರ್ಬಲ್ಯ ಇರುವ ಮಕ್ಕಳಿಗಾಗಿ ವಿಶೇಷ ಶಿಕ್ಷಕರ ವ್ಯವಸ್ಥೆ ಮಾಡಲಾಗಿದೆ. ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ. ಈ ಮಕ್ಕಳತ್ತ ಸಂಪೂರ್ಣವಾಗಿ ಗಮನಹರಿಸುವುದು ಅತ್ಯಗತ್ಯ. ವಿಶೇಷ ತರಬೇತಿಯುಳ್ಳ ಶಿಕ್ಷಕರು ಮಾತ್ರ ಆ ಮಕ್ಕಳ ದೌರ್ಬಲ್ಯಕ್ಕೆ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಿ ಕಲಿಕೆಯನ್ನು ಆರಂಭಿಸುತ್ತಾರೆ. ಪ್ರತಿ ಮಗುವೂ ವಿಶೇಷವಾದ್ದರಿಂದ, ಪ್ರತಿ ಮಗುವಿಗೂ ತನ್ನದೇ ಆದ ವಿಧಾನ ಮತ್ತು ತಂತ್ರಗಾರಿಕೆಯನ್ನು ಅಳವಡಿಸುವುದು ಅಗತ್ಯವಾಗಿರುತ್ತದೆ. ಹೆಚ್ಚಾಗಿ ಪಾಲಕರು ತಮ್ಮ ಮಕ್ಕಳು ಯಾವುದೋ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬಂತೆ ಗಾಬರಿಯಾಗುವುದು ಸಾಮಾನ್ಯ. ಆದರೆ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಇದು ನರದೌರ್ಬಲ್ಯದಿಂದ ಉಂಟಾಗುವ ಏರುಪೇರು. ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ಇದ್ದಲ್ಲಿ ಮಕ್ಕಳ ಕಲಿಕೆಯನ್ನು ಸರಾಗವಾಗಿಸಬಹುದು. ಇದಕ್ಕಿರುವ ಏಕಮಾತ್ರ ಚಿಕಿತ್ಸೆಯೆಂದರೆ ಕಲಿಕಾ ದೌರ್ಬಲ್ಯ ಗುರುತಿಸಿ. ಕಲಿಕೆಗಾಗಿ ಬೆಂಬಲಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.