ಒಟ್ಟಿಗೆ ಚಲಿಸುವುದೇ ನಿಮ್ಮ ಬೆರಳು? ಬೇಕಾಗುವ ಸಾಮಗ್ರಿ: ಮೀಟರ್ ಸ್ಕೇಲ್ ವಿಧಾನ : ೧) ಚಿತ್ರದಲ್ಲಿ ತೋರಿಸಿದಂತೆ ಒಂದು ಮೀಟರ್ ಸ್ಕೇಲನ್ನು ನಿಮ್ಮ ಎರಡು ತೋರುಬೆರಳುಗಳ ಮೇಲೆ ಇರಿಸಿಕೊಳ್ಳಿ. ೨) ಎರಡೂ ಬೆರಳುಗಳನ್ನು ಒಮ್ಮೆಗೆ ಸ್ಕೇಲಿನ ಮಧ್ಯ ಭಾಗದ (ಕೇಂದ್ರ) ಕಡೆಗೆ ಚಲಿಸಿರಿ (ಸರಿಸಿರಿ). ಪ್ರಶ್ನೆ : ಎರಡು ಬೆರಳುಗಳು ಒಮ್ಮೆಗೆ ಸ್ಕೇಲಿನ ಮಧ್ಯ ಭಾಗದ ಕಡೆಗೆ ಚಲಿಸುತ್ತಿವೆಯೇ? ಉತ್ತರ : ಎರಡೂ ಬೆರಳುಗಳು ಒಮ್ಮೆಗೆ ಸ್ಕೆಲಿನ ಮಧ್ಯ ಭಾಗದ ಕಡೆಗೆ ಚಲಿಸುವುದಿಲ್ಲ. ಯಾವ ಬೆರಳು ಮಧ್ಯ ಭಾಗದಿಂದ ದೂರ ಇರುತ್ತದೆಯೋ ಅದು ಮೊದಲು ಸರಿಯುತ್ತದೆ. ಯಾಕೆಂದರೆ ಅದಕ್ಕೆ ಹೆಚ್ಚು ಘರ್ಷಣೆ ಇರುವುದಿಲ್ಲ. ಅದು ಸರಿದ ನಂತರ ಇನ್ನೊಂದು ಬೆರಳು ಮಧ್ಯ ಭಾಗದಿಂದ ದೂರಾಗುತ್ತದೆ. ಆಗ ಅದು ಮಧ್ಯ ಭಾಗದ ಕಡೆಗೆ ಚಲಿಸುತ್ತದೆ. ಹೀಗೆ ಒಂದರನಂತರ ಮತ್ತೊಂದು ಬೆರಳು ಮಧ್ಯ ಭಾಗದ ಕಡೆಗೆ ಚಲಿಸಿ ಸ್ಕೇಲಿನ ಮಧ್ಯ ಭಾಗಕ್ಕೆ ಬರುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.