ಚೆಂಡಿನ ಚಲನೆ ಹೇಗೆ? ಬೇಕಾಗುವ ಸಾಮಗ್ರಿ: 2 ಊದುಕೊಳವೆ, ಒಂದು ಕ್ಲಿಪ್, ಪೆನ್ಸಿಲ್‌, ಟೇಬಲ್ ಟೆನಿಸ್, ರಬ್ಬರ್‌ ಬ್ಯಾಂಡ್‌ ವಿಧಾನ: ಚಿತ್ರದಲ್ಲಿ ತೋರಿಸಿದಂತೆ 2 ಪೇಯ ಕುಡಿಯುವ ಊದುಕೊಳವೆಗಳನ್ನು (ಸ್ಟ್ರಾ) ತೆಗೆದುಕೊಳ್ಳಿರಿ. ಪೇಯದೊಳಗೆ ಇಳಿಬಿಡುವ ತುದಿಯನ್ನು ಕೂಡಿಸಿ ಒಂದು ಕ್ಲಿಪ್ ಹಾಕಿರಿ. ಇನ್ನೊಂದು ಬದಿಯ ಕಡೆ, ಊದುಕೊಳವೆಯ (ಸ್ಟ್ರಾದ) ಕೆಳಗಡೆ ಒಂದು ಪೆನ್ಸಿಲ್ ಇಡಿ. ಪೆನ್ಸಿಲ್ ಕಡೆಯ ಊದು ಕೊಳವೆಯ (ಸ್ಟ್ರಾದ) ಮೇಲೆ ಮತ್ತೊಂದು ಪೆನ್ಸಿಲ್‌ನ್ನು ಇಡಿರಿ. ಕ್ಲಿಪ್ ಕಡೆಯ ಊದುಕೊಳವೆಯ (ಸ್ಟ್ರಾದ) ಮೇಲೆ ಒಂದು ಟೇಬಲ್ ಟೆನಿಸ್ ಚಂಡನ್ನು ಇಡಿ. ಪ್ರಶ್ನೆ: ಪೆನ್ಸಿಲ್ ಮತ್ತು ಚಂಡು ಹೇಗೆ ಚಲಿಸುತ್ತವೆ. ಯಾಕೆ ? ಉತ್ತರ: ಪೆನ್ಸಿಲ್ ಎತ್ತರದ ಕಡೆಯಿಂದ ಕಡಿಮೆ ಎತ್ತರವಿರುವ ಕಡೆ ಅಂದರೆ ಗುರುತ್ವಾಕರ್ಷಣೆಯ ಕೇಂದ್ರ ಬಿಂದುವಿನ ಕಡೆಗೆ ಚಲಿಸುತ್ತದೆ. ಚೆಂಡು ಕೆಳಗಿನಿಂದ ಮೇಲೆ ಹೋಗುತ್ತದೆ. ಚೆಂಡು ಕೆಳಗಿನಿಂದ ಮೇಲೆ ಹೋದರೂ ಕೂಡ ಅದು ಗುರುತ್ವಾಕರ್ಷಣೆಯ ಬಿಂದುವಿನ ಕಡೆಗೇ ಹೋಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.