ಉದ್ಯೋಗಾವಕಾಶ ಅಲ್ಲಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಕೆಎಸ್‌ಪಿನಲ್ಲಿ 380 ಪೊಲೀಸ್‌ ಕಾನ್‌ಸ್ಟೆಬಲ್‌ (ನಾಗರಿಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/7/2014. ಹುದ್ದೆ ಹೆಸರು: 1) ಕಾನ್‌ಸ್ಟೆಬಲ್‌ (ವೈರ್‌ಲೆಸ್‌): 190 ಹುದ್ದೆಗಳು. 2) ಕಾನ್‌ಸ್ಟೆಬಲ್‌ (ರೈಲ್ವೇಸ್‌): 190 ಹುದ್ದೆಗಳು * ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಮೀಸಲಾತಿ ಸೇರಿ. ವೇತನ ಶ್ರೇಣಿ: ರೂ. 11600ರಿಂದ 21000 ವಿದ್ಯಾರ್ಹತೆ: ಕಾನ್‌ಸ್ಟೆಬಲ್‌ (ರೈಲ್ವೆ): ಪಿಯುಸಿ ಅಥವಾ ತತ್ಸಮಾನ. ಕಾನ್‌ಸ್ಟೆಬಲ್‌ (ವೈರ್‌ಲೆಸ್‌): ಪಿಯುಸಿ (ವಿಜ್ಞಾನ) ಅಥವಾ ಮೂರು ವರ್ಷಗಳ ಡಿಪ್ಲೊಮಾ (ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ಸ್‌/ಟೆಲಿ ಕಮ್ಯೂನಿಕೇಷನ್‌/ಕಂಪ್ಯೂಟರ್‌ ಸೈನ್ಸ್‌) ವಯೋಮಿತಿ: ಕನಿಷ್ಠ 19 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ. ಅರ್ಜಿ ಶುಲ್ಕ: ರೂ. 250. * ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 21/7/2014 (ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆಗಳಲ್ಲಿ) ಆಯ್ಕೆ ವಿಧಾನ: ಸಹಿಷ್ಣುತೆ, ದೇಹದಾರ್ಢ್ಯ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಹೆಚ್ಚಿನ ಮಾಹಿತಿಗೆ ... ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಐಡಿಬಿಐನಲ್ಲಿ 500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12/7/2014. * ಬೆಂಗಳೂರಿನಲ್ಲಿರುವ ಐಡಿಬಿಐ ಮಣಿಪಾಲ ಸ್ಕೂಲ್‌ ಆಫ್‌ ಬ್ಯಾಂಕಿಂಗ್‌ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ (ಬ್ಯಾಂಕಿಂಗ್‌ ಹಾಗೂ ಫೈನಾನ್ಸ್‌) ಆದ ಮೇಲೆ. ಹುದ್ದೆ ಹೆಸರು: ಅಸಿಸ್ಟೆಂಟ್‌ ಮ್ಯಾನೇಜರ್‌ ಗ್ರೇಡ್‌ ‘ಎ’ ವೇತನ ಶ್ರೇಣಿ: ರೂ. 14400ರಿಂದ 40900 ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 26 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 600 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ * ಪರೀಕ್ಷೆ ದಿನಾಂಕ: 22/8/2014 * ಪರೀಕ್ಷೆ ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ಸ್ಮಾಲ್‌ ಇಂಡಸ್ಟ್ರೀಸ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಸ್‌ಐಡಿಬಿಐನಲ್ಲಿ 80 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/7/2014. ಹುದ್ದೆ ಹೆಸರು: ಅಸಿಸ್ಟೆಂಟ್‌ ಮ್ಯಾನೇಜರ್‌ ಗ್ರೇಡ್‌ ಎ ಜನರಲ್‌ ಸ್ಟ್ರೀಮ್‌ ವೇತನ ಶ್ರೇಣಿ: ರೂ. 17100ರಿಂದ 33200 ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಮಾಸ್ಟರ್ಸ್‌ ಪದವಿ. ಸಿಎ, ಸಿಎಸ್‌, ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ, ಎಂಜಿನಿಯರಿಂಗ್‌ ಆದವರಿಗೆ ಆದ್ಯತೆ ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ *ಪರೀಕ್ಷೆ ಬೆಂಗಳೂರು, ತುಮಕೂರು, ಮೈಸೂರಿನಲ್ಲಿ ನಡೆಯಲಿದೆ. ಸಂದರ್ಶನ ಚೆನ್ನೈ, ಕೋಲ್ಕತ್ತ, ಲಖನೌ, ಮುಂಬೈ, ನವದೆಹಲಿ. ಹೆಚ್ಚಿನ ಮಾಹಿತಿಗೆ .. ಬ್ಯಾಂಕ್‌ ಆಫ್‌ ಬರೋಡಾ 300 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/7/2014. *ಬರೋಡಾ ಮಣಿಪಾಲ ಸ್ಕೂಲ್‌ ಆಫ್‌ ಬ್ಯಾಂಕಿಂಗ್‌ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ (ಬ್ಯಾಂಕಿಂಗ್‌ ಹಾಗೂ ಫೈನಾನ್ಸ್‌) ಆದ ಮೇಲೆ. ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್‌ ವೇತನ ಶ್ರೇಣಿ: ರೂ. 14400ರಿಂದ 40900 ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.550 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ * ಪರೀಕ್ಷೆ ದಿನಾಂಕ: 14/8/2014 * ಪರೀಕ್ಷೆ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ಸೆಂಟ್ರಲ್‌ ಆರ್ಮ್ಡ್‌ ಪೊಲೀಸ್‌ ಫೋರ್ಸ್‌ ಸಿಎಪಿಎಫ್‌ನಲ್ಲಿ (ನವದೆಹಲಿ) 528 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/7/2014. ಹುದ್ದೆ ಹೆಸರು: 1) ಮೆಡಿಕಲ್‌ ಆಫೀಸರ್‌ (ಅಸಿಸ್ಟೆಂಟ್‌ ಕಮಾಂಡೆಂಟ್‌): 309 ಹುದ್ದೆ, ವಯೋಮಿತಿ: 30 ವರ್ಷ ದಾಟಿರಬಾರದು, 2) ಸ್ಪೆಷಲ್‌ ಮೆಡಿಕಲ್‌ ಆಫೀಸರ್‌ (ಡೆಪ್ಯುಟಿ ಕಮಾಂಡೆಂಟ್‌): 218 ಹುದ್ದೆ, ವಯೋಮಿತಿ: 35 ವರ್ಷ ದಾಟಿರಬಾರದು, 3) ಡೆಂಟಲ್‌ ಸರ್ಜನ್‌ (ಅಸಿಸ್ಟೆಂಟ್‌ ಕಮಾಂಡೆಂಟ್‌): 1 ಹುದ್ದೆ, ವಯೋಮಿತಿ: 40 ವರ್ಷ ದಾಟಿರಬಾರದು. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50 ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌ (ಪಿಇಆರ್ಎಸ್‌) ಮೆಂಬರ್‌ ಸೆಕ್ರೇಟರಿ ಮೆಡಿಕಲ್‌ ಆಫೀಸರ್‌ ಸೆಲೆಕ್ಷನ್‌ ಬೋರ್ಡ್‌ (ಸಿಎಪಿಎಫ್‌): 2014, ಹೆಡ್‌ಕ್ವಾರ್ಟರ್‌ ಡಿಜಿ ಬಿಎಸ್‌ಎಫ್‌ ನಂ. 10, ಸಿಜಿಒ ಕಾಂಪ್ಲೆಕ್ಸ್‌, ಲೋಧಿ ರಸ್ತೆ, ನವದೆಹಲಿ: 110003 ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.