ಅಲ್ಲಲ್ಲಿ ಉದ್ಯೋಗಾವಕಾಶ ಕರ್ನಾಟಕ ರಾಜ್ಯ ಪೊಲೀಸ್‌, ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ, ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಷರೀಸ್‌ ಟೆಕ್ನಾಲಜಿ, ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌, ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌, ಲೈಫ್‌ ಇನ್ಸುರೆನ್ಸ್ ಕಾರ್ಪೊರೇಷನ್‌ ಕರ್ನಾಟಕ ರಾಜ್ಯ ಪೊಲೀಸ್‌ ಬೆಂಗಳೂರು ಪೊಲೀಸ್‌ ಕಮಿಷನರೇಟ್‌ ಘಟಕದಲ್ಲಿ ಖಾಲಿ ಇರುವ ಒಟ್ಟು 2798 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/6/2014. ಹುದ್ದೆ ಹೆಸರು: ಪೊಲೀಸ್‌ ಕಾನ್‌ಸ್ಟೆಬಲ್‌ (ನಾಗರಿಕ) ಪುರುಷ: 2059 ಹಾಗೂ ಮಹಿಳೆ: 515. * ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಮೀಸಲು: ಪುರುಷ: 179 ಹಾಗೂ ಮಹಿಳೆ: 45 * ಘಟಕ: ಬೆಂಗಳೂರು. ವೇತನ ಶ್ರೇಣಿ: ರೂ. 11600ರಿಂದ 21000 ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ ವಯೋಮಿತಿ: ಕನಿಷ್ಠ 19 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ. ಅರ್ಜಿ ಶುಲ್ಕ: ರೂ. 250. * ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 11/6/2014 (ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆಗಳಲ್ಲಿ) ಆಯ್ಕೆ ವಿಧಾನ: ಸಹಿಷ್ಣುತೆ, ದೇಹದಾರ್ಢ್ಯ ಹಾಗೂ ಲಿಖಿತ ಪರೀಕ್ಷೆ ಹೆಚ್ಚಿನ ಮಾಹಿತಿಗೆ ... ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಜಿಎಐಎಲ್‌ನಲ್ಲಿ 85 ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4/6/2014. ಹುದ್ದೆ ಹೆಸರು: ಎಕ್ಸಿಕ್ಯೂಟೀವ್‌ (ಗುಂಪು ಎ) ಹಾಗೂ ನಾನ್‌ ಎಕ್ಸಿಕ್ಯೂಟೀವ್‌ (ಗುಂಪು ಸಿ). ವಿದ್ಯಾರ್ಹತೆ: ಬಿ.ಟೆಕ್‌ ಡಿಪ್ಲೊಮಾ ವೇತನ ಶ್ರೇಣಿ: ಎಕ್ಸಿಕ್ಯೂಟೀವ್‌: ರೂ.24900ರಂದ 50500. ನಾನ್‌ ಎಕ್ಸಿಕ್ಯೂಟೀವ್‌: ರೂ. 14500ರಿಂದ 36000 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ ://. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಬಿಇಎಲ್‌ನಲ್ಲಿ 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4/6/2014. ಹುದ್ದೆ ಹೆಸರು: ಎಂ.ಇ/ಎಂ.ಟೆಕ್‌/ಎಂಎಸ್‌ ಎಂಜಿನಿಯರಿಂಗ್‌ ಪ್ರೊಫೆಷನಲ್ಸ್‌: ವೇತನ ಶ್ರೇಣಿ: ರೂ. 16400ರಿಂದ 50500 ವಯೋಮಿತಿ: 28 ವರ್ಷ ದಾಟಿರಬಾರದು. ಅರ್ಜಿ ಶುಲ್ಕ: ರೂ. 500 ವಿಳಾಸ: ಡೆಪ್ಯುಟಿ ಮ್ಯಾನೇಜರ್‌ (ಎಚ್‌ಆರ್‌), ಸೆಂಟ್ರಲ್‌ ರಿಸರ್ಚ್‌ ಲ್ಯಾಬೊರೇಟರಿ, ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ಜಾಲಹಳ್ಳಿ ಪೋಸ್ಟ್‌, ಬೆಂಗಳೂರು: 560013 ಹೆಚ್ಚಿನ ಮಾಹಿತಿಗೆ ://.-. ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಷರೀಸ್‌ ಟೆಕ್ನಾಲಜಿ ಸಿಐಎಫ್‌ಟಿನಲ್ಲಿ (ಕೊಚ್ಚಿನ್‌) 21 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/5/2014. ಹುದ್ದೆ ಹೆಸರು: ಟೆಕ್ನಿಕಲ್‌ ಹಾಗೂ ಅಡ್ಮಿನಿಸ್ಟ್ರೇಟಿವ್‌ ಹುದ್ದೆಗಳು ವೇತನ ಶ್ರೇಣಿ: ರೂ. 5200ರಿಂದ 20200 ಹಾಗೂ ರೂ. 15600ರಿಂದ 39100 ಅರ್ಜಿ ಶುಲ್ಕ: ರೂ. 200 ವಿಳಾಸ: ಡೈರೆಕ್ಟರ್‌, ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಷರೀಸ್‌ ಟೆಕ್ನಾಲಜಿ, ವಿಲಿಂಗ್ಡನ್‌ ಐಲೆಂಡ್‌, ಮತ್ಸ್ಯಪುರಿ ಪೋಸ್ಟ್, ಕೊಚ್ಚಿನ್: 682029 (ಕೇರಳ) ಹೆಚ್ಚಿನ ಮಾಹಿತಿಗೆ ... ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ ಬಿಎಸ್‌ಎಫ್‌ನಲ್ಲಿ 40 ಹುದ್ದೆಗಳನ್ನು (ಕ್ರೀಡಾ ಮೀಸಲಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8/6/2014. ಹುದ್ದೆ ಹೆಸರು: ಕಾನ್‌ಸ್ಟೆಬಲ್‌ ವೇತನ ಶ್ರೇಣಿ: ರೂ.5200ರಿಂದ 20200 ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿಳಾಸ: ದಿ ಕಮಾಂಡೆಂಟ್‌, 25 ಬಿಎನ್‌ ಬಿಎಸ್‌ಎಫ್‌, ಚಾವ್ಲಾ ಕ್ಯಾಂಪ್‌, ನಜಫ್‌ಗಡ, ನವದೆಹಲಿ: 110071 ಹೆಚ್ಚಿನ ಮಾಹಿತಿಗೆ ... ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌ ಇಸ್ರೋನ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಲ್ಲಿ 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/5/2014. ಹುದ್ದೆ ಹೆಸರು: ಮೆಡಿಕಲ್‌ ಆಫೀಸರ್‌, ಸೈಂಟಿಸ್ಟ್‌/ಎಂಜಿನಿಯರ್‌ ವಯೋಮಿತಿ: ಮೆಡಿಕಲ್ ಆಫೀಸರ್‌: ಕನಿಷ್ಠ: 18 ವರ್ಷ, ಗರಿಷ್ಠ: 40 ವರ್ಷ. ಸೈಂಟಿಸ್ಟ್‌/ಎಂಜಿನಿಯರ್‌: ಕನಿಷ್ಠ: 18 ವರ್ಷ, ಗರಿಷ್ಠ: 35 ವರ್ಷ. ಆಯ್ಕೆ ವಿಧಾನ: ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 9/6/2014 ವಿಳಾಸ: ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌, ರಿಕ್ರೂಟ್‌ಮೆಂಟ್‌ ಸೆಕ್ಷನ್‌, ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌, ಶ್ರೀಹರಿಕೋಟಾ: 524124. ಮಾಹಿತಿಗೆ ... ಲೈಫ್‌ ಇನ್ಸುರೆನ್ಸ್ ಕಾರ್ಪೊರೇಷನ್‌ ಎಲ್‌ಐಸಿನಲ್ಲಿ 114 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇ–ಮೇಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/5/2014. ಹುದ್ದೆ ಹೆಸರು: ಅಸೋಸಿಯೇಟ್‌ ಹುದ್ದೆಗಳು (ತಮಿಳುನಾಡು: 95 ಹುದ್ದೆ, ಕೇರಳ: 19 ಹುದ್ದೆ). ವೇತನ: ರೂ.20000 ವಯೋಮಿತಿ: 63 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಸಂದರ್ಶನ ವಿಳಾಸ (ಪೋಸ್ಟ್‌ನಲ್ಲಿ ಕಳುಹಿಸಲು): ವಲಯ ಮ್ಯಾನೇಜರ್‌, ಎಲ್‌ಐಸಿ ಆಫ್‌ ಇಂಡಿಯಾ, ವಲಯ ಆಫೀಸರ್‌, ಎಲ್‌ಐಸಿ ಬಿಲ್ಡಿಂಗ್‌, 153 ಅಣ್ಣಾ ಸಾಲೈ, ಚೆನ್ನೈ: 600002. ಹೆಚ್ಚಿನ ಮಾಹಿತಿಗೆ .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.