ನಿವೂ ಹೆಲಿಕಾಪ್ಟರ್ ತಯಾರಿಸಿ ಬೇಕಾಗುವ ಸಲಕರಣೆಗಳು: A4 ಅಳತೆಯ ಕಾಗದ, ಪೆನ್ಸಿಲ್, ಕತ್ತರಿ, ಕ್ಲಿಪ್. ವಿಧಾನ: ಎರಡು ಸೆಂಟಿಮೀಟರ್ ಅಗಲ ಹಾಗೂ 10 ಸೆಂಟಿಮೀಟರ್ ಉದ್ದನೆಯ ಒಂದು ಕಾಗದದ ತುಂಡನ್ನು ಕತ್ತರಿಸಿಕೊಳ್ಳಿರಿ. ಚಿತ್ರ ‘ಅ’ ದಲ್ಲಿ ತೋರಿಸಿದಂತೆ ಪೆನ್ಸಿಲ್‌ನಿಂದ ಗುರುತು ಹಾಕಿಕೊಳ್ಳಿ. ಉದ್ದಕ್ಕೆ ಲಂಬವಾಗಿ ಎರಡು ಬದಿಗೆ ಅರ್ಧ ಸೆಂಟಿಮೀಟರ್‌ನಷ್ಟು ಕತ್ತರಿಸಿ ಮತ್ತು ಕಪ್ಪು ಭಾಗಗಳನ್ನು ಮಡಿಚಿ, ಕೆಳಭಾಗದಲ್ಲಿ ಕ್ಲಿಪ್ ಹಾಕಿರಿ ಮತ್ತು ನಡುವಿನ ರೇಖೆಯಗುಂಟ ಕತ್ತರಿಸಿ, ಚಿತ್ರದಲ್ಲಿ ತೋರಿಸಿದಂತೆ ಮಡಚಿರಿ. ಚಿತ್ರ ‘ಬ’ ದಲ್ಲಿ ತೋರಿಸಿದಂತೆ ಹಿಡಿದುಕೊಂಡು ಎತ್ತರದಿಂದ ಬಿಡಿರಿ. ಪ್ರಶ್ನೆ: ನಿಮ್ಮ ಮಾದರಿ ಹೆಲಿಕಾಪ್ಟರ್ ಕೆಳಗೆ ಬರುವಾಗ ಹೇಗೆ ಬರುತ್ತದೆ? ಯಾಕೆ? ತ್ತಿರುವ ಮಾದರಿ ಹೆಲಿಕಾಪ್ಟರ್‌ಗೆ ಆವರ್ತನೆಯಿಂದ ಸ್ಥಿರತೆ ದೊರೆಯುತ್ತದೆ. ಕೆಲವು ಸಸ್ಯಗಳ ಫಲ-ಬೀಜಗಳು ಇದೇ ರೀತಿ ಕಳಚಿ ಪ್ರಸಾರಗೊಳ್ಳುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.