ಆಹಾರ ಸಂರಕ್ಷಣೆ ಬೇಕಾಗುವ ವಸ್ತುಗಳು: ಒಂದು ತುಂಡು ಹಸಿ ಕೊಬ್ಬರಿ. ಒಂದು ತುಂಡು ಪೂರ್ಣ ಒಣಗಿದ ಕೊಬ್ಬರಿ. ವಿಧಾನ: ಒಂದು ತುಂಡು ಹಸಿ ಕೊಬ್ಬರಿಯನ್ನು ಆರ್ದ್ರ ಪ್ರದೇಶ (ಬಚ್ಚಲು ಮನೆ) ಹಾಗೂ ಒಂದು ತುಂಡು ಒಣ ಕೊಬ್ಬರಿಯನ್ನು 3-4 ದಿವಸಗಳವರೆಗೆ ಒಣ ಪ್ರದೇಶದಲ್ಲಿಡಿರಿ. ಪ್ರಶ್ನೆ: 3-4 ದಿವಸಗಳಾದನಂತರ ಎರಡೂ ಕೊಬ್ಬರಿ ತುಂಡುಗಳನ್ನು ಪರೀಕ್ಷಿಸಿರಿ. ಯಾವ ಕೊಬ್ಬರಿ ತುಂಡಿಗೆ ಏನಾಗಿದೆ? ಯಾಕೆ? ಉತ್ತರ: ಹಸಿ ಕೊಬ್ಬರಿ ತುಂಡಿನ ಮೇಲೆ ಕಪ್ಪು ಕಲೆಗಳು ಗೋಚರಿಸುತ್ತವೆ. ಒಣ ಕೊಬ್ಬರಿ ತುಂಡಿನ ಮೇಲೆ ಕಪ್ಪು ಕಲೆಗಳು ಗೋಚರಿಸುವುದಿಲ್ಲ. ಈ ಕಪ್ಪು ಕಲೆಗಳು ಕೊಬ್ಬರಿ ತುಂಡಿನ ಮೇಲೆ ಬೆಳೆದ ಶಿಲೀಂಧ್ರ. ಗಾಳಿಯಲ್ಲಿ ಅನೇಕ ಬಗೆಯ ಬೀಜಕಗಳು ತೇಲಾಡುತ್ತಿರುತ್ತವೆ. ಬೀಜಕಗಳು ಮೊಳಕೆಯೊಡೆದು ಬೆಳೆಯಲು ನೀರು, ಆಹಾರ, ಆರ್ದ್ರತೆ, ತಾಪಮಾನ ಬಹಳ ಮುಖ್ಯ. ಕೆಲವು ಬೀಜಕಗಳಿಗೆ ಸೂಕ್ತವಾದ ಪರಿಸರ ಸಿಕ್ಕರೆ ಅವು ಬೆಳೆಯಲು ಪ್ರಾರಂಭಿಸುತ್ತವೆ. ಒಣಗಿದ ಪದಾರ್ಥಗಳಲ್ಲಿ ನೀರಿನಂಶ ಇರುವುದಿಲ್ಲ ಹಾಗಾಗಿ ಬೀಜಕಗಳು ಬೆಳೆಯುವುದಿಲ್ಲ. ಆದ್ದರಿಂದ ಒಣಗಿದ ಕೊಬ್ಬರಿಯನ್ನು ಬಹಳ ದಿನಗಳವರೆಗೆ ಸಂರಕ್ಷಿಸಿಡಬಹುದು. ಈ ಶಿಲೀಂಧ್ರವು ವಿಷಕಾರಿಯಾಗಿರುವುದರಿಂದ ಇಂಥ ಕೊಬ್ಬರಿಯನ್ನು ಸೇವಿಸಲೇಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.