ವಿಜ್ಞಾನ ವಿದ್ಯಾರ್ಥಿಗಳಿಗೆ 10 ಸಾವಿರ ಸ್ಕಾಲರ್‌ಶಿಪ್‌ ಮೂಲ ವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಆಸಕ್ತಿ ಇರುವ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಹಣಕಾಸು ನೆರವು ನೀಡಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (2014–15ನೇ ಸಾಲಿಗೆ) ಸ್ಕಾಲರ್‌ಶಿಪ್‌ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಸ್ಕಾಲರ್‌ಶಿಪ್‌ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಆಸಕ್ತಿಯನ್ನು ಹೊಂದಿರಬೇಕು. ಅವರು ದೈನಂದಿನ ವಿದ್ಯಾಭ್ಯಾಸದ ಜೊತೆಗೆ ಸಂಶೋಧನೆಯಲ್ಲಿ ನಿರತರಾಗಬೇಕು. ಇತ್ತೀಚಿನ ದಿನಗಳಲ್ಲಿ ಮೂಲ ವಿಜ್ಞಾನವನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಮೂಲ ವಿಜ್ಞಾನದ ಕಡೆ ಸೆಳೆಯಲು ಸರ್ಕಾರ ಈ ಸ್ಕಾಲರ್‌ಶಿಪ್‌ ಯೋಜನೆಯನ್ನು ಆರಂಭಿಸಿದೆ. ಇದನ್ನು ಸದುಪಯೋಗ ಪಡಿಸಿಕೊಂಡಿರುವ ನೂರಾರು ವಿದ್ಯಾರ್ಥಿಗಳು ಭಾರತ ಸರ್ಕಾರ ನೀಡುವ ‘ಯುವ ವಿಜ್ಞಾನಿ’ ಪುರಸ್ಕಾರ ಪಡೆದಿರುವುದು ವಿಶೇಷ. ಶೈಕ್ಷಣಿಕ ಅರ್ಹತೆಗಳು: 1) 2014ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದು, ಸಚಿವಾಲಯ ನಿಗದಿಪಡಿಸಿರುವ ಶೇಕಡವಾರು ಅಂಕಗಳನ್ನು ಪಡೆದಿರಬೇಕು. ಅಥವಾ ಜೆಇಇ, ಎಐಪಿಎಂಟಿ, ಎನ್‌ಇಇಟಿ (ಮೆಡಿಕಲ್‌), ಕೆವಿಪಿವೈ, ಎನ್‌ಟಿಎಸ್‌ಇ ನಂತಹ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಮೆರಿಟ್‌ ಪಟ್ಟಿಯಲ್ಲಿ 10 ಸಾವಿರ ರ್‌್ಯಾಂಕ್‌ ಒಳಗಿರಬೇಕು. ಈ ಸಂಬಂಧದ ಮಾಹಿತಿಗೆ ಸಚಿವಾಲಯದ ವೆಬ್‌ಸೈಟ್‌ ನೋಡಬಹುದು. 2) ಬಿ.ಎಸ್ಸಿ, ಬಿಎಸ್ಸಿ(ಆನರ್ಸ್‌), ಬಿ.ಎಸ್‌, ಎಂ.ಎಸ್ಸಿ, ಎಂ,ಎಸ್‌ ಹಾಗೂ ಸಂಯೋಜಿತ ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆದಿರಬೇಕು. ಪದವಿಗೆ ಈ ಕೆಳಕಂಡ ವಿಷಯಗಳಲ್ಲಿ ಒಂದು ನಿಕಾಯವನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡಿರಬೇಕು. (1) , (2) , (3) , (4) , (5) , (6) , (7), (8) , (9) , (10) , (11) , (12) -, (13),14) ,(15) , (16) -, (17) & (18) ಅವಧಿ/ವೇತನ: ಅಭ್ಯರ್ಥಿಗಳ ಕೋರ್ಸ್‌ ಪೂರ್ಣವಾಗುವವರೆಗೂ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಆದಾಗ್ಯೂ ಸಂಶೋಧನೆ ಪ್ರಗತಿ ಮತ್ತು ಪದವಿಯ ಅಂಕಗಳನ್ನು ಪ್ರತಿ ವರ್ಷ ಮೌಲ್ಯಮಾಪನ ಮಾಡಿ ಸ್ಕಾಲರ್‌ಶಿಪ್‌ ಮುಂದುವರೆಸಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ 80 ಸಾವಿರ ರೂಪಾಯಿ ವೇತನ ಲಭಿಸುವುದು. ಇದರಲ್ಲಿ 20 ಸಾವಿರ ರೂಪಾಯಿಗಳನ್ನು ರಜಾ (ಬೇಸಿಗೆ) ದಿನಗಳ ಸಂಶೋಧನೆಗಾಗಿ ನೀಡಲಾಗುವುದು. ಸ್ಕಾಲರ್‌ಶಿಪ್‌ಗಳ ಸಂಖ್ಯೆ ಮತ್ತು ಷರತ್ತುಗಳು: ಭಾರತದ ವಿದ್ಯಾರ್ಥಿಗಳು ಮಾತ್ರ ಈ ಸ್ಕಾಲರ್‌ ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರು. ಒಟ್ಟು 10000 ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುವುದು. ಎಂಜಿನಿಯರಿಂಗ್‌, ಮೆಡಿಸಿನ್‌, ತಂತ್ರಜ್ಞಾನ, ಅಪ್ಲೈಡ್‌ ಸೈನ್ಸ್‌, ತಾಂತ್ರಿಕ ವಿಜ್ಞಾನ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಆಯ್ಕೆ ವಿಧಾನ: ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸಲಾಗುವುದು. ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ವಿಧಾನವು ಪಾರದರ್ಶಕವಾಗಿರುತ್ತದೆ. ಸರ್ಕಾರದ ಅನ್ವಯ ಮೀಸಲಾತಿಯನ್ನು ಪರಿಗಣಿಸಲಾಗುತ್ತದೆ. ಒಂದು ಪಕ್ಷದಲ್ಲಿ 10 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿದ್ದರೆ ಎಲ್ಲರನ್ನೂ ಆಯ್ಕೆ ಮಾಡುವ ಸಂಭವ ಹೆಚ್ಚಿದೆ. ವಿದ್ಯಾಭ್ಯಾಸದ ಜೊತೆಗೆ ಸಂಶೋಧನಾ ಯೋಜನೆಯನ್ನು ಕೈಗೊಳ್ಳುವುದು ಕಡ್ಡಾಯ. ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮುಖಾಂತರವೇ ಸಲ್ಲಿಸಬೇಕು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾರ್ಯನಿರತವಾಗಿರುವ ಇ–ಮೇಲ್‌ ಐಡಿಯನ್ನು ಹೊಂದಿರಬೇಕು. ನಿಖರವಾಗಿ ಭರ್ತಿ ಮಾಡಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. .-.. ಈ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು. ಬಳಿಕ ಭರ್ತಿ ಮಾಡಿದ ಅರ್ಜಿಯ ಒಂದು ಪ್ರಿಂಟ್‌ಔಟ್‌ ಅನ್ನು ತೆಗೆದಿರಿಸಿಕೊಳ್ಳಬೇಕು. ಇದನ್ನು ದಾಖಲಾತಿ ಪತ್ರಗಳೊಂದಿಗೆ ಅಂಚೆ ಮುಖಾಂತರ ಕಳುಹಿಸಬಾರದು. ಅರ್ಜಿ ಸಲ್ಲಿಸುವ ಮೊದಲು ಈ ಕೆಳಕಂಡ ಅಗತ್ಯ ದಾಖಲಾತಿ ಪತ್ರಗಳನ್ನು ಪಿಡಿಎಫ್‌ ಮಾದರಿಯಲ್ಲಿ ಸ್ಕ್ಯಾನ್‌ ಮಾಡಿ ಇಟ್ಟುಕೊಳ್ಳಬೇಕು. ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ (ಜೆಪೆಗ್‌/50ಕೆಬಿ), ಜಾತಿ ಪ್ರಮಾಣ ಪತ್ರ, ರಾಜ್ಯ ಅಥವಾ ಕೇಂದ್ರಿಯ ಶಿಕ್ಷಣ ಮಂಡಳಿಯವರು ನೀಡುವ ಅರ್ಹತಾ ಪತ್ರ, ಎರಡನೇ ಪಿಯುಸಿಯ ಅಂಕಪಟ್ಟಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜೆಇಇ, ಎಐಪಿಎಂಟಿ, ಎನ್‌ಇಇಟಿ, ಕೆವಿಪಿವೈ, ಎನ್‌ಟಿಎಸ್‌ಇನ ರ್‌್ಯಾಂಕ್‌ ಪ್ರಮಾಣ ಪತ್ರಗಳು, ಪದವಿ ಮತ್ತು ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆದಿರುವ ಬಗ್ಗೆ ಪ್ರಾಂಶುಪಾಲರಿಂದ ಪಡೆದ ದಾಖಲಾತಿ ಪ್ರಮಾಣ ಪತ್ರ ಹಾಗೂ ಸಂಶೋಧನೆಗೆ ಸಂಬಂಧಿಸಿದ ಪೂರಕ ಪ್ರಮಾಣ ಪತ್ರಗಳನ್ನು ಸ್ಕ್ಯಾನ್‌ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ಬಳಿಕ ಸ್ಕ್ಯಾನ್‌ ಮಾಡಿರುವ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಅರ್ಜಿಯ ನಿಗದಿತ ಸ್ಥಳ (ಸ್ಪೆಸ್‌)ದಲ್ಲಿ ಅಪ್ಲೋಡ್‌ ಮಾಡಬೇಕು. ಅರ್ಜಿ ಸಲ್ಲಿಕೆಯ ಮಾಹಿತಿಯು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಇ–ಮೇಲ್‌ಗೆ ಬರಲಿದೆ. ಇದರ ಬಗ್ಗೆ ಯಾವುದೇ ಪತ್ರ ವ್ಯವಹಾರ ನಡೆಸಲು ಅವಕಾಶ ಇರುವುದಿಲ್ಲ. ಅಕ್ಟೋಬರ್‌ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ .-../ guidelineforSHE_Online. ಈ ವೆಬ್‌ಸೈಟ್‌ ನೋಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.