ಜ್ವಾಲೆ ಮೇಲ್ಮುಖವೇಕೆ? ಬೇಕಾಗುವ ಸಲಕರಣೆಗಳು: ಮೋಂಬತ್ತಿ, ಬೆಂಕಿಪೆಟ್ಟಿಗೆ. ವಿಧಾನ: 1) ಒಂದು ಮೋಂಬತ್ತಿಯನ್ನು ಬೆಂಕಿಕಡ್ಡಿಯಿಂದ ಉರಿಸಿ, ಕೈಯಲ್ಲಿ ಹಿಡಿದುಕೊಳ್ಳಿರಿ. 2) ಚಿತ್ರ 2 ಹಾಗೂ 3 ರಲ್ಲಿ ತೋರಿಸಿದಂತೆ ಉರಿಯುತ್ತಿರುವ ಮೋಂಬತ್ತಿಯನ್ನು ಹಿಡಿಯಿರಿ. ಪ್ರಶ್ನೆ: ನೇರವಾಗಿ ಹಿಡಿದ ಮೋಂಬತ್ತಿಯ ಜ್ವಾಲೆ ಮೇಲ್ಗಡೆ ಉರಿಯುವುದನ್ನು ತಾವು ನೋಡಿದ್ದೀರಿ. ಚಿತ್ರ2 ಹಾಗೂ 3 ರಲ್ಲಿ ತೋರಿಸಿದಂತೆ ಉರಿಯುತ್ತಿರುವ ಮೋಂಬತ್ತಿಯನ್ನು ಹಿಡಿದುಕೊಂಡರೆ ಜ್ವಾಲೆ ಹೇಗೆ ಉರಿಯುತ್ತದೆ? ಯಾಕೆ? ಉತ್ತರ: ಉರಿಯುತ್ತಿರುವ ಎಲ್ಲ ಇಂಧನಗಳಲ್ಲಿ ಕಾರ್ಬನ್ ಹಾಗೂ ಹೈಡ್ರೊಜನ್‌ಗಳಿವೆ. ಇವು ದಹಿಸುವಾಗ ಕಾರ್ಬನ್ ಆಕ್ಸಿಜನ್‌ನೊಂದಿಗೆ ದಹಿಸಿ ಕಾರ್ಬನ್‌ಡೈಆಕ್ಸೈಡ್ ಅನಿಲವು ಹಾಗೂ ಹೈಡ್ರೊಜನ್ ದಹಿಸಿ ನೀರು ಉತ್ಪತ್ತಿಯಾಗುತ್ತವೆ. ಈ ದಹನ ಕ್ರಿಯೆಯಲ್ಲಿ ಇತರ ಕೆಲವು ಅನಿಲಗಳೂ ಉತ್ಪತ್ತಿಯಾಗುತ್ತವೆ. ದಹನ ಕ್ರಿಯೆಯಲ್ಲಿ ಬೆಳಕು ಮತ್ತು ಉಷ್ಣ ಬಿಡುಗಡೆಯಾಗುತ್ತವೆ. ‘ಜ್ವಾಲೆ’ ಅಂದರೆ ಉರಿಯುತ್ತಿರುವ ಅನಿಲಗಳು. ದಹನ ಕ್ರಿಯೆಯಲ್ಲಿ ಬಿಡುಗಡೆಯಾದ ಅನಿಲಗಳು ಹವೆಗಿಂತ ಹಗುರವಾಗಿರುತ್ತವೆ. ಹೀಗಾಗಿ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿ ಉರಿಯುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.