ಬೆಳಕಿಗೆ ನೆರಳುಂಟೇ? ಬೇಕಾಗುವ ಸಲಕರಣೆ: ಮೋಂಬತ್ತಿ, ಬೆಂಕಿ ಪೆಟ್ಟಿಗೆ, ಬ್ಯಾಟರಿ (ಟಾರ್ಚ್‌). ವಿಧಾನ: ಉರಿಯುತ್ತಿರುವ ಒಂದು ಮೋಂಬತ್ತಿಯನ್ನು ಮೇಜಿನ ಮೇಲಿಟ್ಟು ಕತ್ತಲ ಕೋಣೆಯಲ್ಲಿಡಿ. ಮೋಂಬತ್ತಿ ಗೋಡೆಗೆ ಸಮೀಪವಿರಲಿ. ಗೋಡೆಯ ವಿರುದ್ಧ ದಿಕ್ಕಿನಿಂದ, ಮೋಂಬತ್ತಿಯ ಮೇಲೆ ಬ್ಯಾಟರಿಯ ಬೆಳಕನ್ನು ಬಿಡಿ. ಪ್ರಶ್ನೆ: ಕತ್ತಲೆ ಕೋಣೆಯಲ್ಲಿ ಮೋಂಬತ್ತಿ ಹಾಗೂ ಜ್ವಾಲೆಯ ನೆರಳು ಗೋಡೆಯ ಮೇಲೆ ಕಾಣಿಸುತ್ತದೆಯೇ? ಅಥವಾ ಇಲ್ಲವೇ? ಬ್ಯಾಟರಿಯ ಬೆಳಕನ್ನು ಮೋಂಬತ್ತಿಯ ಬದಿಯಿಂದ ಬಿಟ್ಟಾಗ ಮೋಂಬತ್ತಿಯ ಯಾವ ಭಾಗದ ನೆರಳು ಕಾಣುತ್ತದೆ. ಯಾಕೆ? ಉತ್ತರ: ಕತ್ತಲೆಯ ಕೋಣೆಯಲ್ಲಿ ಮೋಂಬತ್ತಿಯ ಹಾಗೂ ಜ್ವಾಲೆಯ ನೆರಳು ಗೋಡೆಯ ಮೇಲೆ ಕಾಣಿಸುವುದಿಲ್ಲ. ಪಕ್ಕದ ಬದಿಯಿಂದ ಬ್ಯಾಟರಿಯ ಬೆಳಕು ಉರಿಯುತ್ತಿರುವ ಮೋಂಬತ್ತಿಯ ಮೇಲೆ ಬಿದ್ದಾಗ ಬೆಳಕಿನ ಮೂಲ ಬಿಟ್ಟು, ಉಳಿದ ಮೋಂಬತ್ತಿಯ ನೆರಳು ಗೋಡೆಯ ಮೇಲೆ ಗೋಚರಿಸುತ್ತದೆ. ಅಂದರೆ ಬೆಳಕಿನ ಮೂಲ ಯಾವತ್ತೂ ನೆರಳನ್ನುಂಟು ಮಾಡುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.